ADVERTISEMENT

`ಪ್ರತಿಭೆಗಳಿಗೆ ವೇದಿಕೆ ಸಿಗುವುದು ಅಪರೂಪ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:36 IST
Last Updated 20 ಡಿಸೆಂಬರ್ 2012, 8:36 IST

ದೇವದುರ್ಗ: ಎಲ್ಲರಲೂ ಪ್ರತಿಭೆ ಕಾಣುವುದು ಸ್ವಾಭಾವಿಕ ಆದರೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಗುವುದು ಬಹಳ ವಿರಳ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಕೆ. ಶಿವನಗೌಡ ನಾಯಕ ಅಭಿಪ್ರಾಯಪಟ್ಟರು.

ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಸರ್ಕಾರ ಪ್ರತಿಭಾ ಕಾರಂಜಿ ಎಂಬ ವೇದಿಕೆಯನ್ನು ಜಾರಿಗೆ ತಂದಿರುವುದರಿಂದ ಎಷ್ಟೊ ವಿದ್ಯಾರ್ಥಿಗಳಲ್ಲಿನ ಕಂಡು ಬರುವ ವಿವಿಧ ಪ್ರತಿಭೆಯನ್ನು ನಾವು ಕಾಣಬಹುದಾಗಿದೆ ಎಂದರು.

ಏಕ ಅಭಿನಯ ಪಾತ್ರವನ್ನು ವಿದ್ಯಾರ್ಥಿಗಳು ನಿರ್ವಹಿಸಬೇಕು ದ್ವಿಪಾತ್ರ ಅಭಿನಯವನ್ನು ರಾಜಕಾರಣಿಗಳು ನಿರ್ವಹಿಸಬೇಕು ಇದಕ್ಕೆ ಕಾರಣ ಅಧಿಕಾರ ಒಂದು ಪಕ್ಷದಲ್ಲಿ ಅನುಭವಿಸಿದರೆ ಸಂಪರ್ಕವನ್ನು ಇನ್ನೂಂದು ಪಕ್ಷದ ಜೊತೆ ಇಟ್ಟುಕೊಳ್ಳುವುದು ದ್ವಿ ಅಭಿನಯ ಪಾತ್ರ ರಾಜಕೀಯ ವ್ಯಕ್ತಿಗಳಿಗೆ ಸಲ್ಲುವುದರಿಂದ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ದ್ವಿ ಅಭಿನಯ ಪಾತ್ರ ಅಳವಡಿಸಿಕೊಳ್ಳಬಾರದು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪ್ರಕಾಶ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಕೊಪ್ಪರ, ಸಿದ್ದಣತಾತ ಮುಂಡರಗಿ, ಕೆಂಚಣ್ಣತಾತ ಮುಂಡರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಹಾಗೂ ಇಲಾಖೆಯ ಬಿಆರ್‌ಪಿ, ಸಿಆರ್‌ಪಿ ಹಾಗೂ ವಿವಿಧ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.