ADVERTISEMENT

ವಿವಿಧೆಡೆ ಕಾಯಕಯೋಗಿ ಬಸವೇಶ್ವರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 10:05 IST
Last Updated 25 ಏಪ್ರಿಲ್ 2012, 10:05 IST

ರಾಯಚೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮಂಗಳವಾರ ಭಕ್ತಿ ಭಂಡಾರಿ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ರಾಯಚೂರು ನಗರದ ವಿವಿಧ ಸಂಘ ಸಂಸ್ಥೆಗಳಿಂದ ಮಂಗಳವಾರ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕರವೇ ಸಂಘಟನೆ:
ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಅವರು ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಜಯಂತ್ಯುತ್ಸವನ್ನು ಆಚರಿಸಿದರು.

ಸುನೀಲ್ ಅಗರವಾಲ್, ಅಶೋಕ ಲೋದಾ, ಆಂಜನೇಯಲು, ನಿಖಿಲ್, ಕೊಂಡಪ್ಪ, ಮಹೇಶ ಪಾಟೀಲ್, ಅಮರಯ್ಯಸ್ವಾಮಿ, ಹಮೀದ್ ಮುಲ್ಲಾ, ವೆಂಕಟೇಶ ಮಡಿವಾಳ, ಶರಣಪ್ಪ ಆಟೋ, ಸ್ವಾಮಿಯಾದವ್, ಕರೀಮ್, ಪಾಟೀಲ್ ಹಾಗೂ ಮತ್ತಿತರರಿದ್ದರು.

ಜಯ ಕರ್ನಾಟಕ ಸಂಘಟನೆ: ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ ಯಾದವ್ ಅವರು ನಗರದ ಬಸವಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ರವಿಕುಮಾರ ಬಿಂದಲಬಾವಿ, ಬಿ.ರಾಕೇಶ, ಎಂ.ಡಿ ರಫಿಕ್, ಮಹಾದೇವ ಯಾದವ್, ಎಂ.ಡಿ ಮುನ್ನಾ, ಶಿವಶರಣ ಸಾಹುಕಾರ ಹಾಗೂ ಮತ್ತಿತರರಿದ್ದರು.

ಸಿಂಧನೂರು ವರದಿ: ತಾಲ್ಲೂಕು ಆಡಳಿತದ ವತಿಯಿಂದ ಬಸವೇಶ್ವರ ಜಯಂತಿ ಅಂಗವಾಗಿ ಮಂಗಳವಾರ ಸಂಜೆ ನಗರದ ವಿವಿಧ ರಸ್ತೆಗಳಲ್ಲಿ ಬಸವಣ್ಣ ಸೇರಿದಂತೆ ವಿವಿಧ ಶರಣರ ಭಾವಚಿತ್ರಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು,

ತಹಶೀಲ್ದಾರ ಕೆ.ನರಸಿಂಹ ನಾಯಕ ಬಸವಣ್ಣರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕುಷ್ಟಗಿ ಮುಖ್ಯರಸ್ತೆ ಮೂಲಕ ಬಸವ ವೃತ್ತಕ್ಕೆ ಮೆರವಣಿಗೆ ತಲುಪಿತು. ಬಸವ ಪುತ್ಥಳಿಗೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವಿಸಿದರು. ನಂತರ ಮಹಾವೀರ ರಸ್ತೆಯ ಮೂಲಕ ಆರ್‌ಜಿಎಂ ಮೈದಾನಕ್ಕೆ ಮೆರವಣಿಗೆ ತಲುಪಿತು.

ಬಸವಣ್ಣ, ಅಂಬೇಡ್ಕರ್, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ, ಆಯ್ದಕ್ಕಿ ಲಕ್ಕಮ್ಮ ಮತ್ತಿತರ ಶರಣರ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು. ಬಾಗಲಕೋಟೆಯ ಯುವತಿಯರ ವೀರಗಾಸೆ ತಂಡದ ನೃತ್ಯ ಮೆರವಣಿಗೆಗೆ ಕಳೆ ತಂದುಕೊಟ್ಟಿತು.

ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ಸದಸ್ಯರಾದ ಶಿವನಗೌಡ ಎಲೆಕೂಡ್ಲಗಿ, ಬಸಮ್ಮ ಕುಂಟೋಜಿ,

ಇಂದಿರಮ್ಮ ಮಲ್ಲನಗೌಡ, ನಗರಸಭೆ ಅಧ್ಯಕ್ಷೆ ಪದ್ಮಾವತಿ ಕರಿಯಪ್ಪ, ಉಪಾಧ್ಯಕ್ಷ ಎಂ.ಡಿ.ನದೀಮ್‌ಮುಲ್ಲಾ, ಪೌರಾಯುಕ್ತ ಕೊಪ್ರೇಶಾಚಾರ, ಡಿವೈಎಸ್‌ಪಿ ವೀರೇಶ ಬೆಳವಡಿ, ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಕಾರ್ಯದರ್ಶಿ ವೀರಭದ್ರಪ್ಪ ಕುರುಕುಂದಿ, ಶಿವಣ್ಣ ಹ.ಸಣ್ಣಪ್ಪನವರ್, ಸಿದ್ರಾಮಪ್ಪ ಮಾಡಸಿರವಾರ, ಶಾಮಣ್ಣ ನಾಯಕ ಮತ್ತಿತರರು ಭಾಗವಹಿಸಿದ್ದರು.

ಹತ್ತಿಗುಡ್ಡ ಗ್ರಾಮ: ತಾಲ್ಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ಬಸವ ಜಯಂತಿಯ ಅಂಗವಾಗಿ ಪ್ರಮುಖ ಬೀದಿಗಳನ್ನು ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಗ್ರಾಮದ ವಿವಿಧ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಭಾವಚಿತ್ರವನ್ನು ವಿವಿಧ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಸಿದ್ದಯ್ಯಸ್ವಾಮಿ ಹಿರೇಮಠ, ಸಂಗಯ್ಯಸ್ವಾಮಿ ಹಿರೇಮಠ, ಜಗದೇವಯ್ಯಸ್ವಾಮಿ ಹಿರೇಮಠ ಸೇರಿದಂತೆ ಬಸವೇಶ್ವರ ಯುವಕ ಮಂಡಳಿ ಹಾಗೂ ನಿರುಪಾದೇಶ್ವರ ಯುವಕ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜಾಲಹಳ್ಳಿ ವರದಿ: ಪಟ್ಟಣದ ಬಸವ ಸಮಿತಿಯ ವತಿಯಿಂದ ಮಂಗಳವಾರ ಜಗಜ್ಯೋತಿ ಬಸವೇಶ್ವರರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಸಾಯಂಕಾಲ ಸ್ಥಳೀಯ ಬಸವಣ್ಣ ದೇವರ ದೇವಸ್ಥಾನದಿಂದ ಎತ್ತಿನ ಬಂಡಿಯಲ್ಲಿ ಬಸವಣ್ಣನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆ ಹೊರಟು ಪಟ್ಟಣದಲ್ಲಿರುವ ಬಸವೇಶ್ವರ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಯಿತು.
 
ಅಲ್ಲಿಂದ ನೇರವಾಗ ಜಯಶಾಂತಲಿಂಗೇಶ್ವರ ಮಠಕ್ಕೆ ಮೆರವಣಿಗೆ ಮೂಲಕ ತೆರಳಿ ವಚನ ಗಾಯನ ಕಾರ್ಯಕ್ರಮ ನಡೆಸಲಾಯಿತು. ಮೆರವಣಿಗೆಯಲ್ಲಿ ಗ್ರಾ.ಪಂ ಅಧ್ಯಕ್ಷ ಜಿ. ಬಸವರಾಜ ನಾಯಕ, ಮಾಜಿ ಜಿ.ಪಂ.ಸದಸ್ಯ ಬಸವರಾಜ ಪಂಪಾಪತಿ, ಬಿಜೆಪಿ ಮುಖಂಡರಾದ ಜಗನ್ನಾಥರಾಯ ಪಾಟೀಲ್, ಶಿವುಕುಮಾರ ಪಾಣಿ, ಶಾಂತಗೌಡ ಪಾಟೀಲ್, ಈರಣ್ಣ ಬಳೆ, ಶಶಿಕಾಂತ ಪಾಟೀಲ್, ಅಮರೇಶ ಬಿಆರ್ ಗುಂಡ, ಈಶಣ್ಣ ಸೌದ್ರಿ, ಸಲಬಣ್ಣ ಬಟ್ಟೆ ಅಂಗಡಿ, ಬಸವರಾಜ ತೇಕೂರು, ಮಲ್ಲಿರ್ಕಾಜುನ್ ಶಿರಣಿ, ಶರಣು ಹುಣಸಗಿ, ಶಿಕ್ಷಕ ಗಂಗಾರೆಡ್ಡಿ ಪಾಟೀಲ್ ಸೇರಿದಂತೆ ಬವಸ ಸಮಿತಿಯ ಅನೇಕರು ಯುವಕರು ಭಾಗವಹಿಸಿದ್ದರು.

ಮಾನ್ವಿ ವರದಿ: ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಬಸವೇಶ್ವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿ ಆವರಣದವರೆಗೆ ವಿಜೃಂಭಣೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಹಂಪಯ್ಯ ನಾಯಕ, `ಸಮಾನತೆಯ ತತ್ವ ಪ್ರತಿಪಾದನೆ ಮೂಲಕ ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಮೌಢ್ಯತೆಗಳನ್ನು ಅಳಿಸಲು ಶ್ರಮಿಸಿದರು. ವಿಶ್ವಶಾಂತಿಗೆ ಬಸವಣ್ಣನವರ ತತ್ವಗಳು ಪೂರಕವಾಗಿದ್ದು ಪ್ರತಿಯೊಬ್ಬರೂ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು~ ಎಂದರು.

`ಬಸವಣ್ಣನವರ ಬದುಕು ಮತ್ತು ಸಾಧನೆ~ ಕುರಿತು ವಿಶೇಷ ಉಪನ್ಯಾಸ ನೀಡಿದ ಬಸವ ಕೇಂದ್ರದ ಅಧ್ಯಕ್ಷ ಜಿ.ಎಮ್.ರಂಗಪ್ಪ, `ವರ್ಣರಹಿತ ಸಮಾಜ ನಿರ್ಮಾಣ ಬಸವಣ್ಣನವರ ಗುರಿಯಾಗಿತ್ತು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಹ ಬಸವಣ್ಣನವರ ಸಮಾನತೆಯ ತತ್ವಗಳನ್ನು ಸಂವಿಧಾನದ ಮೂಲಕ ಜಾರಿಗೆ ತರಲು ಶ್ರಮಿಸಿದರು~ ಎಂದರು.ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಂಪನಗೌಡ ನೀರಮಾನ್ವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹನುಮೇಶ ಮದ್ಲಾಪುರ ಹಾಗೂ ಗೋಪಾಲ ನಾಯಕ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಎಪಿಎಮ್‌ಸಿ ಅಧ್ಯಕ್ಷ ಚಂದ್ರಶೇಖರ ಕುರ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉಮೇಶ ಸಜ್ಜನ್, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ತಹಸೀಲ್ದಾರ್ ಗಂಗಪ್ಪ ಕಲ್ಲೂರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯ ಹಿರೇಮಠ ವೇದಿಕೆಯಲ್ಲಿದ್ದರು. ಮಲ್ಲಮ್ಮ ಪ್ರಾರ್ಥಿಸಿದರು. ಶಿಕ್ಷಕ ರಾಮಲಿಂಗಪ್ಪ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.