ADVERTISEMENT

ರಾಯಚೂರಿನಲ್ಲಿ ಮತ್ತೆ 23 ಜನರಿಗೆ ಕೋವಿಡ್‌ ದೃಢ

ಆಸ್ಪತ್ರೆಯಲ್ಲಿರುವ ಸೋಂಕಿತರ ಸಂಖ್ಯೆ 154 ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 13:57 IST
Last Updated 7 ಜುಲೈ 2020, 13:57 IST

ರಾಯಚೂರು: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 23 ಜನರಿಗೆ ಕೋವಿಡ್‌ ದೃಢವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 154 ಕ್ಕೆ ಹೆಚ್ಚಳವಾಗಿದೆ.

ಕೋವಿಡ್‌ನಿಂದ ಗುಣಮುಖರಾದ 16 ಜನರನ್ನು ಆಸ್ಪತ್ರೆಯಿಂದ ಮಂಗಳವಾರ ಮನೆಗೆ ಕಳುಹಿಸಿದ್ದು, ಇದುವರೆಗೂ ಗುಣಮುಖರಾದವರ ಸಂಖ್ಯೆ 438 ಕ್ಕೆ ಏರಿಕೆಯಾಗಿದೆ. ಕೋವಿಡ್‌ನಿಂದ ಗುಣಮುಖರಾದವರು ಮತ್ತು ಆಸ್ಪತ್ರೆಯಲ್ಲಿ ಇರುವವರು ಸೇರಿ ಒಟ್ಟು 598 ಮಂದಿ. ಗುಣಮುಖರಾದವರ ಪ್ರಮಾಣವು ಶೇ 73 ರಷ್ಟಿದೆ.

23 ಪಾಸಿಟಿವ್‌ ಪ್ರಕರಣಗಳಲ್ಲಿ 8 ಮಾನ್ವಿ ತಾಲ್ಲೂಕು, 6 ಸಿಂಧನೂರು ತಾಲ್ಲೂಕು, 2 ರಾಯಚೂರು ತಾಲ್ಲೂಕು ಹಾಗೂ 7 ಪ್ರಕರಣಗಳು ದೇವದುರ್ಗ ತಾಲ್ಲೂಕಿನವು. ಪಾಸಿಟಿವ್‌ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಹಿಂತಿರುಗಿದ ದೇವದುರ್ಗ ತಾಲ್ಲೂಕಿನ ಮಿಯ್ಯಾಪುರದ 5 ವರ್ಷದ ಬಾಲಕ, 11 ವರ್ಷದ ಬಾಲಕಿ ಸೇರಿ ನಾಲ್ವರು ಒಂದೇ ಗ್ರಾಮದವರು. ಮಹಾರಾಷ್ಟ್ರದಿಂದ ಹಿಂತಿರುಗಿದ ಹಾಲದಹಟ್ಟಿ ಗ್ರಾಮದ 16 ವರ್ಷ ಬಾಲಕ ಸೇರಿ ಮೂವರಿಗೆ ಕೋವಿಡ್‌ ಪತ್ತೆಯಾಗಿದೆ. ರಾಯಚೂರು ನಗರದಲ್ಲಿ ಬೆಂಗಳೂರಿನಿಂದ ಹಿಂತಿರುಗಿದ್ದ 30 ವರ್ಷದ ವ್ಯಕ್ತಿಗೆ ಹಾಗೂ ಕೆಮ್ಮು, ಜ್ವರದಿಂದ ಬಳಲಿದ ಡ್ಯಾಡಿ ಕಾಲೋನಿಯ 60 ವರ್ಷದ ವ್ಯಕ್ತಿಯದ್ದು ಪಾಜಿಟಿವ್‌ ವರದಿ ಇದೆ.

ADVERTISEMENT

ಜಿಲ್ಲೆಯಲ್ಲಿ ವಿವಿಧೆಡೆ 135 ಜನರು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ಗಂಟಲು ಮಾದರಿಗಳ ಪೈಕಿ ಇನ್ನೂ 2,041 ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.