ADVERTISEMENT

ಅಂತ್ಯಕ್ರಿಯೆಲ್ಲಿ ಭಾಗಿಯಾಗಿದ್ದ 38 ಜನರಿಗೆ ಹೋಂ ಕ್ವಾರಂಟೈನ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:40 IST
Last Updated 2 ಜೂನ್ 2020, 16:40 IST

ದೇವದುರ್ಗ: ಕೋವಿಡ್‌ನಿಂದ ಈಚೆಗೆ ಮೃತಪಟ್ಟತಾಲ್ಲೂಕಿನ ಕೋತಿಗುಡ್ಡ ಗ್ರಾಮದ ಶಿವಪ್ಪ ಬಲ್ಲಿದವ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 38 ಸಂಬಂಧಿಗಳನ್ನು ತಾಲ್ಲೂಕು ಆಡಳಿತವು ಹೋಂ ಕ್ವಾರಂಟೈನ್‌ ಮಾಡಿದೆ.

ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಮಾಹಿತಿ ಸಂಗ್ರಹಕ್ಕಾಗಿ ತಂಡ ರಚಿಸಲಾಗಿತ್ತು. ಇದೀಗ ಹೋಂ ಕ್ವಾರಂಟೈನ್‌ ಇರಬೇಕಾದವರ ಕೈ ಮಣಿಕಟ್ಟಿಗೆ ಮುದ್ರೆ ಹಾಕಲಾಗಿದೆ ಎಂದು ತಹಶೀಲ್ದಾರ್‌ ಮಧುರಾಜ ತಿಳಿಸಿದ್ದಾರೆ.

ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸಲಾಗಿದೆ. ಗ್ರಾಮದಲ್ಲಿನ ಸಾರ್ವಜನಿಕ ಕೊಳೆಬಾವಿಯನ್ನು ಬಳಸದಂತೆ ಸೂಚಿಸಲಾಗಿದೆ. ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ಮುಂಬೈನಿಂದ ಮೇ 21 ರಂದು ಬಂದಿದ್ದ ಮೃತ ಶಿವಪ್ಪ ಅವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್‌ ಬಂದಿತ್ತು. ಆದರೆ, ಮೇ 28 ರಂದು ಕೋವಿಡ್‌ ಲಕ್ಷಣಗಳು ಕಾಣಿಸಿದ್ದರಿಂದ ದೇವದುರ್ಗದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಿಂದ ರಾಯಚೂರು ಒಪೆಕ್‌ಗೆ ಸ್ಥಳಾಂತರಿಸಲಾಗಿತ್ತು. ಮೇ 29 ರಂದು ಆಸ್ಪತ್ರೆಯಲ್ಲಿ ಮೃತಪಟ್ಟದ್ದರಿಂದ ಮತ್ತೆ ಗಂಟಲು ದ್ರುವ ಪರೀಕ್ಷೆಗೆ ಕಳುಹಿಸಿದಾಗ, ಪಾಸಿಟಿವ್‌ ವರದಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.