ಹಟ್ಟಿಚಿನ್ನದಗಣಿ: ಇಲ್ಲಿನ ಹಟ್ಟಿಚಿನ್ನದಗಣಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಶೇ 95ರಷ್ಟು ಮತದಾನವಾಗಿದೆ.
ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಮಯ ನಿಗದಿ ಮಾಡಿದ್ದರೂ ಕಾರ್ಮಿಕರ ಸರದಿ ಅಧಿಕವಾಗಿದ್ದರಿಂದ 6 ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು.
ಕಣದಲ್ಲಿ ಎಐಟಿಯುಸಿ, ಸಿಐಟಿಯು, ಟಿಯುಸಿಐ, ಆಕಳು ಸಂಘಟನೆ ಹಾಗೂ ಬಿಎಂಎಸ್‌ನ ಅಭ್ಯರ್ಥಿಗಳು ಇದ್ದರು.
ಒಟ್ಟು 3,394 ಕಾರ್ಮಿಕರಲ್ಲಿ 3,222 ಕಾರ್ಮಿಕರು ಮತ ಚಲಾಯಿಸಿದ್ದಾರೆ.
ಮಲ್ಲಪ್ಪ ಶಾಫ್ಟ್ 981 ಕಾರ್ಮಿಕರಲ್ಲಿ 950 ಜನ ಕಾರ್ಮಿಕರು, ಸೆಂಟ್ರೆಲ್ ಶಾಫ್ಟ್ 471 ಕಾರ್ಮಿಕರಲ್ಲಿ 457 ಕಾರ್ಮಿಕರು, ಆಡಳಿತ ವಿಭಾಗದ 447 ಕಾರ್ಮಿಕರಲ್ಲಿ 441, ಎಂಜಿನಿಯರ್ ‘ಎ’ ವಿಭಾಗದಲ್ಲಿ 372ರಲ್ಲಿ 369 ಜನ ಕಾರ್ಮಿಕರು, ಎಂಜಿನಿಯರ್ ‘ಬಿ’ ವಿಭಾಗದಲ್ಲಿ 341ರಲ್ಲಿ 334 ಕಾರ್ಮಿಕರು, ವಿಲೇಜ್ ಶಾಫ್ಟ್ 165ರಲ್ಲಿ 164 ಕಾರ್ಮಿಕರು, ಲೋಹ ವಿಭಾಗದ 351ರಲ್ಲಿ 345 ಜನ ಕಾರ್ಮಿಕರು, ಬುದ್ದಿನ್ನಿ ಗಣಿಯಲ್ಲಿ 129ರಲ್ಲಿ 129 ಕಾರ್ಮಿಕರು, ಊಟಿ ಗಣಿಯಲ್ಲಿ 137ರಲ್ಲಿ 133 ಜನ ಕಾರ್ಮಿಕರು ಮತ ಚಲಾಯಿಸಿದ್ದಾರೆ.
ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಆರಂಭವಾಗಲಿದೆ.
ಮೊದಲಿಗೆ ಶಾಫ್ಟ್‌ಗಳ ಫಲಿತಾಂಶ ನಂತರ ಉಳಿದ ಸ್ಥಾನಗಳ ಫಲಿತಾಂಶ ಸಂಜೆ ವೇಳೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.