ADVERTISEMENT

ಅದ್ದೂರಿಯಾಗಿ ಜರುಗಿದ ಬಸವೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 14:00 IST
Last Updated 8 ಮೇ 2019, 14:00 IST
ರಾಯಚೂರು ತಾಲ್ಲೂಕಿನ ತುರುಕನಡೋಣಿ ಗ್ರಾಮದಲ್ಲಿ ಮಂಗಳವಾರ ಬೋಳಬಂಡೆ ಬಸವೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಉಚ್ಚಾಯ ಜರುಗಿತು
ರಾಯಚೂರು ತಾಲ್ಲೂಕಿನ ತುರುಕನಡೋಣಿ ಗ್ರಾಮದಲ್ಲಿ ಮಂಗಳವಾರ ಬೋಳಬಂಡೆ ಬಸವೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಉಚ್ಚಾಯ ಜರುಗಿತು   

ರಾಯಚೂರು: ತಾಲ್ಲೂಕಿನ ತುರುಕನಡೋಣಿ ಗ್ರಾಮದಲ್ಲಿ ಶ್ರೀ ಬೋಳಬಂಡೆ ಬಸವೇಶ್ವರರ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆಯಿಂದ ವಿಶೇಷ ಪೂಜೆ ನೆರವೇರಿಸಿ, ಸಂಜೆ ಬಸವನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ನಂದಿಕೋಲು ಸೇವೆ ಮೂಲಕ ಮೆರವಣಿಗೆ ಮಾಡಲಾಯಿತು. ಆನಂತರ ಅಗಸೆಯಲ್ಲಿ ನೂರಾರು ಜನರ ಸಮ್ಮುಖದಲ್ಲಿ ಉಚ್ಚಾಯ ಮಹೋತ್ಸವ ನಡೆಯಿತು. ಭಕ್ತರು ಉಚ್ಚಾಯ ಎಳೆದು ಈ ವರ್ಷ ಉತ್ತಮ ಮಳೆ, ಬೆಳೆ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಗ್ರಾಮದ ಮುಖಂಡರಾದ ಬಸನಗೌಡ ಪಾಟೀಲ, ಸುಧಾಕರರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹುಲಿಗೆಪ್ಪ, ವೀರೇಶ, ರಾಜಪ್ಪ, ಅರ್ಚಕ ಬಸವರಾಜ ಸ್ವಾಮಿ, ವೆಂಕಟರಾಮರೆಡ್ಡಿ ಗುಂಜಳ್ಳಿ, ಸುರೇಶ ರೆಡ್ಡಿ, ಚನ್ನವೀರ ಮಾಲಿಪಾಟೀಲ, ಶೇಖರ, ವೀರನಗೌಡ, ಈಶಪ್ಪರೆಡ್ಡಿ, ಪಿ.ಮಂಜುನಾಥ ರೆಡ್ಡಿ, ಗೋವರ್ದನರಡ್ಡಿ, ತಿಮ್ಮಪ್ಪ, ಪಿ.ವೀರನಗೌಡ, ಚಿದಾನಂದ ವಿಶ್ವಕರ್ಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.