ADVERTISEMENT

ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು

ಬಿ.ಆರ್.‌ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಶಾಲಾ ಸಂಸತ್‌ ರಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:04 IST
Last Updated 3 ಜುಲೈ 2025, 15:04 IST
ಕವಿತಾಳ ಸಮೀಪದ ಹಾಲಾಪುರದ ಬಿ.ಆರ್.ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಗುರುವಾರ ಮತದಾನದ ನಂತರ ಸ್ಪರ್ಧಿಗಳು ಹಾಗೂ ಶಿಕ್ಷಕರು ವಿಜಯದ ಸಂಕೇತ ತೋರಿಸಿದರು
ಕವಿತಾಳ ಸಮೀಪದ ಹಾಲಾಪುರದ ಬಿ.ಆರ್.ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಗುರುವಾರ ಮತದಾನದ ನಂತರ ಸ್ಪರ್ಧಿಗಳು ಹಾಗೂ ಶಿಕ್ಷಕರು ವಿಜಯದ ಸಂಕೇತ ತೋರಿಸಿದರು   

ಕವಿತಾಳ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಮಹತ್ವ ಹಾಗೂ ರಾಜಕೀಯ ವ್ಯವಸ್ಥೆ ಕುರಿತು ಮಕ್ಕಳಿಗೆ ಮಾಹಿತಿ ನೀಡುವಲ್ಲಿ ಶಾಲಾ ಸಂಸತ್‌ ಸಹಕಾರಿಯಾಗಿದೆ’ ಎಂದು ಪ್ರಾಚಾರ್ಯ ವೆಂಕೋಬ ದೇವಪುರ ಹೇಳಿದರು.

ಇಲ್ಲಿಗೆ ಸಮೀಪದ ಹಾಲಾಪುರ ಗ್ರಾಮದ ಬಿ.ಆರ್.‌ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಗುರುವಾರ ಶಾಲಾ ಸಂಸತ್‌ ರಚನೆ ಸಂದರ್ಭದಲ್ಲಿ ಮಾತನಾಡಿದ ಅವರು,‘ಶಾಲಾ ಸಂಸತ್‌ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಮಕ್ಕಳು ಮತ ಚಲಾಯಿಸಿದರು’ ಎಂದು ಹೇಳಿದರು.

ಶಿಕ್ಷಕರಾದ ರೇವಣ ಸಿದ್ದಪ್ಪ, ವೀರಯ್ಯ, ಪಂಪಣ್ಣ, ಆದಮ್ಮ, ಅಚ್ಚಮ್ಮ, ಶಾಂತಮ್ಮ, ಬಸಮ್ಮ, ವಿದ್ಯಾಶ್ರೀ, ನಿರ್ಮಲಾ, ನರಸಮ್ಮ ವಸತಿ ನಿಲಯದ ಮೇಲ್ವಿಚಾರಕಿ ಸುನಿತಾ ಪಾಟೀಲ್ ಮತ್ತು ಆರೋಗ್ಯ ಸುರಕ್ಷಾ ಅಧಿಕಾರಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.