ADVERTISEMENT

ಕೋವಿಡ್‌-19: ಪಾಸಿಟಿವ್‌ ಪ್ರಕರಣ 71 ಕ್ಕೆ ಏರಿಕೆ

ಬುಧವಾರ ಬಂದಿರುವ ವರದಿಯಲ್ಲಿ ಐವರಿಗೆ ದೃಢ

​ಪ್ರಜಾವಾಣಿ ವಾರ್ತೆ
Published 27 ಮೇ 2020, 13:59 IST
Last Updated 27 ಮೇ 2020, 13:59 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ರಾಜ್ಯ ಆರೋಗ್ಯ ಇಲಾಖೆಯಿಂದ ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಲ್ಲೆಯ ಐದು ಮಂದಿಗೆ ಕೋವಿಡ್‌ ದೃಢವಾಗಿದ್ದು, ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 66 ರಿಂದ 71 ಕ್ಕೆ ಏರಿಕೆಯಾಗಿದೆ.

ಪಿ–2321 (ವಯಸ್ಸು 25), ಪಿ–2322 (ವಯಸ್ಸು 30), ಪಿ–2323 (ವಯಸ್ಸು 20), ಪಿ–2324 (ವಯಸ್ಸು 60), ಪಿ–2325–2325 (ವಯಸ್ಸು 12) ಎಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಾಗಿದ್ದು, ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಳಿಸಲಾಗಿದೆ. ಸೋಂಕಿತರಲ್ಲಿ ಓರ್ವ ಬಾಲಕಿ ಸೇರಿ ಮೂವರು ಹೆಣ್ಣುಮಕ್ಕಳು, ಇಬ್ಬರು ಪುರುಷರಿದ್ದಾರೆ. ಚಿಕಿತ್ಸೆಗಾಗಿ ಎಲ್ಲರನ್ನು ಒಪೆಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರು ಬಹುತೇಕ ಕ್ವಾರಂಟೈನ್‌ ಕೇಂದ್ರಗಳಲ್ಲೇ ಇದ್ದು, ನಿಗಾ ವಹಿಸಲಾಗಿದೆ.

ಜೂನ್‌ ಆರಂಭಕ್ಕೆ ಕೊರೊನಾ ಸೋಂಕು ಹರಡದಂತೆ ಹತೋಟಿಗೆ ಬರಬಹುದು, ಲಾಕ್‌ಡೌನ್‌ ಮುಕ್ತಾಯವಾಗುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಆದರೆ, ಸೋಂಕಿತರ ಸಂಖ್ಯೆಯು ಮತ್ತೆ ಏರಿಕೆ ಆಗುತ್ತಿರುವುದು ಕಳವಳ ಹುಟ್ಟುಹಾಕಿದೆ. ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಏರಿಕೆ ಆಗುತ್ತಿದ್ದು, ಕ್ವಾರಂಟೈನ್‌ ಕೇಂದ್ರಗಳು ಸದ್ಯಕ್ಕೆ ಸ್ಥಗಿತವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ಜೂನ್‌ ಕೂಡಾ ಕೊರೊನಾ ಸೋಂಕಿನ ವಿರುದ್ಧ ಜಾಗೃತಿಯಿಂದ ಜೀವನ ನಡೆಸುವುದು ಅನಿವಾರ್ಯವಾಗಲಿದೆ.

ADVERTISEMENT

ಕೋವಿಡ್‌ ಸೋಂಕಿತರು 71 ರಲ್ಲಿ 50 ದೇವದುರ್ಗ ತಾಲ್ಲೂಕು, ರಾಯಚೂರು ತಾಲ್ಲೂಕು 17 ಮತ್ತು ಲಿಂಗಸೂಗೂರು ತಾಲ್ಲೂಕಿನ 4 ಪ್ರಕರಣಗವೆ.

ಪಾಸ್‌ ಪರಿಶೀಲನೆ: ಮಹಾರಾಷ್ಟ್ರ, ಗುಜರಾತ್, ದೆಹಲಿ, ಪಂಜಾಬ್, ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳಿಂದ ಜಿಲ್ಲೆಯ ಒಳಗಡೆ ಪ್ರವೇಶಿಸುವವರು ಕಡ್ಡಾಯವಾಗಿ ಪಾಸ್ ಹೊಂದಿರುವುದನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರೆಡ್ ಜೋನ್ ರಾಜ್ಯಗಳಿಂದ ಕಣ್ತಪ್ಪಿಸಿ ಕಾರ್ಮಿಕರು ಹಾಗೂ ಜನರು ಬಂದರೆ ತಪಾಸಣೆ ಮಾಡಿ ಕ್ವಾರಂಟೈನ್‌ ಮಾಡಬೇಕು. ಸರ್ಕಾರದ ಮಾರ್ಗಸೂಚಿ ಸರಿಯಾಗಿ ಓದಿಕೊಂಡು ಪಾಲನೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.