ADVERTISEMENT

ರಾಯಚೂರು ವೆಂಕಟೇಶನಿಗೆ ಕೇರಳದಲ್ಲಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:23 IST
Last Updated 10 ಸೆಪ್ಟೆಂಬರ್ 2019, 20:23 IST
ಕೇರಳದ ಕೊಯಿಕ್ಕೊಡ್‌ನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಿರೇರಾಯನಕುಂಪೆ ಗ್ರಾಮದ ವೆಂಕಟೇಶನನ್ನು ಸನ್ಮಾನಿಸಲಾಯಿತು
ಕೇರಳದ ಕೊಯಿಕ್ಕೊಡ್‌ನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಿರೇರಾಯನಕುಂಪೆ ಗ್ರಾಮದ ವೆಂಕಟೇಶನನ್ನು ಸನ್ಮಾನಿಸಲಾಯಿತು   

ರಾಯಚೂರು: ಕೃಷ್ಣಾನದಿ ಪ್ರವಾಹದ ಸಂದರ್ಭದಲ್ಲಿ ಜೀವದ ಹಂಗು ತೊರೆದು ನೀರಿನಲ್ಲಿ ಮುನ್ನುಗ್ಗಿ ಆ್ಯಂಬುಲೆನ್ಸ್‌ಗೆ ದಾರಿತೋರಿದ್ದ ವಿದ್ಯಾರ್ಥಿ ವೆಂಕಟೇಶನನ್ನು ಕೇರಳದ ಕೋಯಿಕ್ಕೊಡ್‌ದಲ್ಲಿ ಹಲವು ಸಂಘ ಸಂಸ್ಥೆಗಳು ಈಚೆಗೆ ಸನ್ಮಾನಿಸಿದವು.

ಸನ್ಮಾನ ಮಾಡಿ ಆತನ ಧೈರ್ಯ ಮತ್ತು ಸಾಹಸಗಳನ್ನು ಜನರು ಕೊಂಡಾಡಿದ್ದಾರೆ. ಉತ್ತರ ಮಲಬಾರ್ ಪ್ರದೇಶದಾದ್ಯಂತ ವೆಂಕಟೇಶನ ಭಾವಚಿತ್ರ ಬ್ಯಾನರ್ ಗಳಲ್ಲಿ, ಪೋಸ್ಟರ್‌ಗಳಲ್ಲಿ ಪ್ರಕಟಿಸುತ್ತಿದೆ. ಅನೇಕ ಕಡೆಗಳಲ್ಲಿ ಜನರು ವಿವಿಧ ಉಡುಗೊರೆಗಳನ್ನು ನೀಡಿ ಸನ್ಮಾನಿಸುತ್ತಿದ್ದು, ಕೇರಳದ ಖಾಸಗಿ ರೇಡಿಯೋ ವಾಹಿನಿಯಲ್ಲಿ ಮೊದಲ ಬಾರಿ ‘ಮ್ಯಾಂಗೋ ವೆಂಕಟೇಶ’ ಹೆಸರಿನಲ್ಲಿ ಸಂದರ್ಶನವನ್ನು ಭಿತ್ತರಿಸಿದೆ.

ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಫೋಕಸ್ ಇಂಡಿಯಾ ಸನ್ಮಾನಿಸಿವೆ. ಕೊಯಿಕ್ಕೊಡ್‌ ಜಿಲ್ಲಾಧಿಕಾರಿ ಸೀರಮ್ ಸಾಂಬಶಿವರಾವ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬು ಪರಸ್ಸೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ. ಸಿದ್ಧಕಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ವಿ. ವಾಸೀಫ್, ಎಂಐಎಲ್ ರಾಷ್ಟ್ರೀಯ ಕಾರ್ಯದರ್ಶಿ ಸಿ.ಕೆ.ಸಬೀರ್ ಸಮಾರಂಭದಲ್ಲಿದ್ದರು.

ADVERTISEMENT

ವೆಂಕಟೇಶನಿಗೆ ಆತನ ಗ್ರಾಮದಲ್ಲಿ ಹೊಸ ಮನೆಯೊಂದನ್ನು ನಿರ್ಮಿಸಿ ಕೊಡುವ ಬಗ್ಗೆ ಕೆಲವು ಸಂಘ–ಸಂಸ್ಥೆಗಳು ಆಸಕ್ತಿಯಿಂದ ಮುಂದೆ ಬಂದಿವೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.