ADVERTISEMENT

ಸುರಪುರ | ಸಾಲ ಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:44 IST
Last Updated 12 ಆಗಸ್ಟ್ 2025, 6:44 IST
ಭೀಮಣ್ಣ
ಭೀಮಣ್ಣ   

ಸುರಪುರ: ಸಾಲ ಬಾಧೆಯಿಂದ ತಾಲ್ಲೂಕಿನ ವಾರಿಸಿದ್ದಾಪುರ ಗ್ರಾಮದ ಭೀಮಣ್ಣ ದೇವಿಂದ್ರಪ್ಪ ಕೊಳ್ಳೂರು (53) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಮಲ್ಲಮ್ಮ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

26 ಗುಂಟೆ ಜಮೀನು ಹೊಂದಿದ್ದು, ಒಕ್ಕಲುತನ ಮಾಡಿಕೊಂಡಿದ್ದರು. ₹ 8 ಲಕ್ಷ ಖಾಸಗಿ ಸಾಲ ಮಾಡಿಕೊಂಡಿದ್ದರು. ಬೆಳೆ ನಷ್ಟವಾಗಿ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.