ADVERTISEMENT

ಕೊರೊನಾ ವಾರಿಯರ್ಸ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:34 IST
Last Updated 2 ಜೂನ್ 2020, 16:34 IST
ರಾಯಚೂರಿನ ಕನ್ನಡ ಭವನದಲ್ಲಿ ಮಂಗಳವಾರ ಪೌರಕಾರ್ಮಿಕ ಮಹಿಳೆಯರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಇಳಕಲ್‌ ಸೀರೆ ಮತ್ತು ಮಾಸ್ಕ್ ವಿತರಿಸುವ ಕಾರ್ಯಕ್ರಮ ನಡೆಯಿತು
ರಾಯಚೂರಿನ ಕನ್ನಡ ಭವನದಲ್ಲಿ ಮಂಗಳವಾರ ಪೌರಕಾರ್ಮಿಕ ಮಹಿಳೆಯರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಇಳಕಲ್‌ ಸೀರೆ ಮತ್ತು ಮಾಸ್ಕ್ ವಿತರಿಸುವ ಕಾರ್ಯಕ್ರಮ ನಡೆಯಿತು   

ರಾಯಚೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರು, ವೈದ್ಯರು, ದಾದಿಯರು ಮತ್ತು ಪೋಲೀಸರ ಕಾರ್ಯ ಪ್ರಸಂಶನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಬ್ರೆಜಿಲ್‌ ದೇಶದಲ್ಲಿ ನೆಲೆಸಿರುವ ಕನ್ನಡಿಗ ಅಶ್ವಿನಿ ರಂಗರಾವ್ ದೇಸಾಯಿ ಕಾಡ್ಲೂರು ಇವರ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕ ಮಹಿಳೆಯರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಸೀರೆ ಮತ್ತು ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾ ಸೋಂಕು ಹೆಚ್ಚು ಹರಡದಂತೆ ತಡೆಯುವಲ್ಲಿ ಕೊರೊನಾ ವಾರಿಯರ್ಸ್ ಅವರ ಶ್ರಮ ಅಭಿನಂದನೀಯ. ನೇಕಾರರಿಂದ ನೇಯ್ದ ಇಳಕಲ್ ಸೀರೆ ನೀಡುತ್ತಿರುವ ಅಶ್ವಿನಿ ರಂಗರಾವ್ ದೇಸಾಯಿಯವರ ಕಾರ್ಯವೂ ಮಾದರಿಯಾಗಿದೆ ಇದರಿಂದ ನೇಕಾರರಿಗೆ ಆರ್ಥಿಕ ಸಹಾಯವಾಗುತ್ತದೆ ಎಂದರು.

ADVERTISEMENT

ನಿವೃತ್ತ ಆಯುಷ್ ಅಧಿಕಾರಿ ಡಾ.ರೂಪಾಬಾಯಿ ಫಡ್ನೀಸ್ ಮಾತನಾಡಿದರು.

ಗ್ರೀನ್ ರಾಯಚೂರು ಸಂಸ್ಥೆಯ ಸಂಚಾಲಕ ರಾಜೇಂದ್ರ ಶಿವಾಳೆ , ಡಾ.ಆನಂದ್ ತೀರ್ಥ ಫಡ್ನೀಸ್, ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು, ಜಿಲ್ಲಾ ಜಾನಪದ ಪರಿಷತ್ ಕಾರ್ಯದರ್ಶಿ ದಂಡಪ್ಪ ಬಿರಾದರ, ಭಾರತಿ, ರಾಧಾ, ವಿಜಯಲಕ್ಷ್ಮೀ ಶಿವಾಳೆ, ವೈಷ್ಣವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.