ADVERTISEMENT

ಸಿಂಧನೂರು: ಜೋಳದ ಬೀಜಕ್ಕೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:19 IST
Last Updated 12 ಆಗಸ್ಟ್ 2025, 7:19 IST
ಸಿಂಧನೂರು ನಗರದ ಅಂಬಿಕಾ ಟ್ರೇಡಿಂಗ್ ಕಂಪನಿಗೆ ಸೇರಿದ ಅಂಗಡಿ ಮುಂದೆ ರೈತರು ಬಿತ್ತನೆ ಬೀಜ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು
ಸಿಂಧನೂರು ನಗರದ ಅಂಬಿಕಾ ಟ್ರೇಡಿಂಗ್ ಕಂಪನಿಗೆ ಸೇರಿದ ಅಂಗಡಿ ಮುಂದೆ ರೈತರು ಬಿತ್ತನೆ ಬೀಜ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು   

ಸಿಂಧನೂರು: ಹೈಟೆಕ್-3201 ಕಂಪನಿಯ ಜೋಳದ ಬೀಜಕ್ಕಾಗಿ ನಗರದ ರಾಯಚೂರು ರಸ್ತೆಯಲ್ಲಿರುವ ಅಂಬಿಕಾ ಟ್ರೇಡಿಂಗ್ ಕಂಪನಿಯ ಅಂಗಡಿ ಮುಂದೆ ಶನಿವಾರ ನೂಕುನುಗ್ಗಲು ಉಂಟಾಯಿತು.

ಕಳೆದ ವರ್ಷದಂತೆ ಈ ಬಾರಿಯೂ ಹೈಟೆಕ್-3201 ಜೋಳದ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಬಿತ್ತನೆ ಬೀಜ ಅಂಬಿಕಾ ಟ್ರೇಡಿಂಗ್ ಕಂಪನಿಯಲ್ಲಿ ಮಾತ್ರ ಸಿಗುತ್ತಿದೆ. ಶನಿವಾರ ಬೆಳಿಗ್ಗೆಯಿಂದ ನಿರಂತರ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ನೂರಾರು ರೈತರು ವಿವಿಧ ಗ್ರಾಮಗಳಿಂದ ಬೆಳಿಗ್ಗೆ 9 ಗಂಟೆಯಿಂದಲೇ ಬಂದು ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಂತು ನೂಕುನುಗ್ಗಲು ನಡೆಸಿ 3 ಕೆಜಿಯ ಒಂದು ಪ್ಯಾಕೇಟ್‍ಗೆ ₹1,300 ನೀಡಿ ಖರೀದಿಸಿದ್ದು ಕಂಡುಬಂತು.

ಹೈಟೆಕ್-3201 ಜೋಳದ ಬೀಜ ಮಳೆಯ ಪ್ರಮಾಣ ಕಡಿಮೆಯಾದರೂ ಉತ್ತಮವಾಗಿ ಬೆಳೆ ಬಂದು ರೈತರ ಕೈ ಸೇರುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.