ADVERTISEMENT

ಕಲಬುರಗಿ ವಲಯ ಮಟ್ಟದ ಚೆಸ್ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:04 IST
Last Updated 2 ಆಗಸ್ಟ್ 2025, 7:04 IST
ರಾಯಚೂರು ನಗರದ ನವೋದಯ ದಂತ ಕಾಲೇಜಿನಲ್ಲಿ ಶುಕ್ರವಾರ ಕಲಬುರಗಿ ವಲಯ ಮಟ್ಟದ ಚೆಸ್ ಪಂದ್ಯಾವಳಿಗೆ ನವೋದಯ ಶಿಕ್ಷಣ ಟ್ರಸ್ಟ್ ನ ರಿಜಿಸ್ಟ್ರಾರ್ ಡಾ. ಟಿ. ಶ್ರೀನಿವಾಸ್ ಚಾಲನೆ ನೀಡಿದರು
ರಾಯಚೂರು ನಗರದ ನವೋದಯ ದಂತ ಕಾಲೇಜಿನಲ್ಲಿ ಶುಕ್ರವಾರ ಕಲಬುರಗಿ ವಲಯ ಮಟ್ಟದ ಚೆಸ್ ಪಂದ್ಯಾವಳಿಗೆ ನವೋದಯ ಶಿಕ್ಷಣ ಟ್ರಸ್ಟ್ ನ ರಿಜಿಸ್ಟ್ರಾರ್ ಡಾ. ಟಿ. ಶ್ರೀನಿವಾಸ್ ಚಾಲನೆ ನೀಡಿದರು   

ರಾಯಚೂರು: ನಗರದ ನವೋದಯ ದಂತ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಲಯ ಪುರುಷರು ಮತ್ತು ಮಹಿಳೆಯರ ಚೆಸ್ ಪಂದ್ಯಾವಳಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ನವೋದಯ ಶಿಕ್ಷಣ ಟ್ರಸ್ಟ್ ನ ರಿಜಿಸ್ಟ್ರಾರ್ ಡಾ. ಟಿ.ಶ್ರೀನಿವಾಸ್ ಪಂದ್ಯಾವಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕಾರ್ಯತಂತ್ರದ ಚಿಂತನೆ, ತಾಳ್ಮೆ ಹಾಗೂ ಮಾನಸಿಕ ಶಿಸ್ತು ಬೆಳೆಸಲು ಚೆಸ್ ಕ್ರೀಡೆ ಸಹಕಾರಿ’ ಎಂದರು.

ನವೋದಯ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎಸ್.ಆರ್. ರೆಡ್ಡಿ ಕಾಲೇಜಿನ ಪ್ರಾಂಶುಪಾಲ ಗಿರೀಶ ಕಟ್ಟಿ, ನವೋದಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ದೇವಾನಂದ, ವಲಯ ಸಂಯೋಜಕ ನೇಥಾನಿಯಲ್, ಡಾ.ಅಮೃತ ರೆಡ್ಡಿ, ಡಾ. ಪಿ. ವಿಜಯಕುಮಾರ, ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಕಾಂತ, ಡಾ.ಕಿರಣಕುಮಾರ ಉಪಸ್ಥಿತರಿದ್ದರು.

ADVERTISEMENT

ಕಲಬುರಗಿ ವಲಯದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯೋಜಿತ
27 ಕಾಲೇಜುಗಳ 100ಕ್ಕೂ ಅಧಿಕ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.