ಕವಿತಾಳ: ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಕ್ರೀಡಾಭಿಮಾನಿಗಳು ಉಪ ತಹಶೀಲ್ದಾರ್ ಮಂಜುನಾಥ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ಇಲ್ಲಿನ ಸರ್ಕಾರಿ ಜಾಗ ಸರ್ವೆ ನಂಬರ್ 19/2 ಮತ್ತು 19/3 ರಲ್ಲಿ 6 ಎಕರೆ ಜಮೀನು ಗುರುತಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ಮಾಡಲಾಗಿದೆ. ಜಾಗದ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ’ ಎಂದು ಹೇಳಿದರು.
ಸದ್ರಿ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರುತ್ತದೆ ಎನ್ನುವ ಕಾರಣಕ್ಕೆ ಕಾಮಗಾರಿ ಆರಂಭಕ್ಕೆ ತಡೆಯೊಡ್ಡಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕರವೇ ಮುಖಂಡ ಸಂತೋಷ ಕಲಶೆಟ್ಟಿ ಒತ್ತಾಯಿಸಿದರು.
ಮುಖಂಡರಾದ ಶ್ರೀನಿವಾಸ ಗುತ್ತೇದಾರ, ಲಿಂಗರಾಜ ಗುತ್ತೇದಾರ, ಅನೀಫ್, ರಿಯಾಜ್ ಆನ್ವರಿ, ಕೆಂಚಪ್ಪ, ಎಂ.ಡಿ.ರಫಿ, ಮೌನೇಶ, ದಸ್ತು, ಮಂಜುನಾಥ, ಮಲ್ಲಿಕಾರ್ಜುನ, ಬಸವರಾಜ, ಅಜಯ್ ಕಲಶೆಟ್ಟಿ, ಸುರೇಶ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.