ಮಾನ್ವಿ: ‘ಯುವ ಸಮುದಾಯ ಶೋಷಣೆ ಮುಕ್ತ ಸಮ ಸಮಾಜ ಕಟ್ಟಲು ಮುಂದಾಗಬೇಕು’ ಎಂದು ನಟ ಚೇತನ್ ಹೇಳಿದರು.
ಪಟ್ಟಣದ ಧ್ಯಾನ ಮಂದಿರದಲ್ಲಿ ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಇಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯ ವಿಷಯಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಕೃತಿಗಳು ಹಾಗೂ ಬಸವಣ್ಣನವರ ವಚನಗಳ ಅಧ್ಯಯನ ಮಾಡಬೇಕು. ಯುವ ಸಮುದಾಯ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.
‘ಸಮಾಜ ಸೇವೆ, ಚಳವಳಿಗಳ ಮೂಲಕ ಮಾತ್ರ ಜನರಿಗೆ ಹತ್ತಿರವಾಗಲು ಸಾಧ್ಯ. ಸಮಾಜದಲ್ಲಿನ ಹಲವು ಸಮಸ್ಯೆಗಳಿಗೆ ರಚನಾತ್ಮಕವಾಗಿ ಹೋರಾಟದ ಮೂಲಕ ಪರಿಹರಿಸಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಹಿರಿಯ ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ರವಿ ಪಾಟೀಲ, ಕೆ.ಎಂ.ಸಂದೇಶ, ಈರಣ್ಣ ಮರ್ಲಟ್ಟಿ, ಹನುಮೇಶ ಮದ್ಲಾಪುರ, ಅರುಣ್ ಚಂದಾ, ಮನೋಜ್ ಮಿಶ್ರಾ, ಮಹಿಳಾ ಸಂಘಟಕಿ ಚಿನ್ನಮ್ಮಮುದ್ದಮಗುಡ್ಡಿ, ಡಾ.ಅಂಬಿಕಾ ಮಧುಸೂದನ್, ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಲ್ಲೇಶ ಮಾಚನೂರು, ಹನುಮಂತ ಬ್ಯಾಗವಾಟ, ಶಿವಕುಮಾರ ಮ್ಯಾಗಳಮನಿ, ಹನುಮೇಶ ನಾಯಕ ಜೀನೂರು, ದತ್ತಾತ್ರೇಯ ಹಿರೇಕೊಟ್ನೆಕಲ್, ಆಂಜನೇಯ ನಾಯಕ ನಸಲಾಪುರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.