ADVERTISEMENT

ಲಿಂಗಸುಗೂರು | ನಿಂತ ಲಾರಿಗೆ ಬಸ್ ಡಿಕ್ಕಿ: 21 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:20 IST
Last Updated 12 ಆಗಸ್ಟ್ 2025, 7:20 IST
ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿ ಬಳಿ ಅಪಘಾತಕ್ಕೀಡಾದ ಬಸ್
ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿ ಬಳಿ ಅಪಘಾತಕ್ಕೀಡಾದ ಬಸ್   

ಲಿಂಗಸುಗೂರು: ಇಲ್ಲಿಯ ಬಸ್‌ ಘಟಕಕ್ಕೆ ಸೇರಿದ ಲಿಂಗಸುಗೂರು–ಮೈಸೂರು ಬಸ್ ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿ ಬಳಿ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕರೂ ಸೇರಿದಂತೆ 21 ಮಂದಿ ಗಾಯಗೊಂಡ ಘಟನೆ ಆಗಸ್ಟ್ 9ರ ಮಧ್ಯರಾತ್ರಿ ನಡೆದಿದೆ.

ಲಿಂಗಸುಗೂರು-ಮೈಸೂರು ಸ್ಲೀಪರ್ ಕೋಚ್ ಬಸ್ ಮೈಸೂರಿಗೆ ತೆರಳುತ್ತಿತ್ತು. ಮಾಡನಾಯಕನಹಳ್ಳಿ ಹತ್ತಿರ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಚಾಲಕ ಯಮನಯ್ಯ ಸ್ವಾಮಿ (59) ಹಾಗೂ ಚಾಲಕ ಕಂ ನಿರ್ವಾಹಕ ಚಂದ್ರಶೇಖರ ಗೌಡೂರು ಅವರ ಕಾಲುಗಳಿಗೆ ಬಲವಾದ ಪೆಟ್ಟಾಗಿದೆ. 19 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT