ADVERTISEMENT

ವಿವಿಧೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:13 IST
Last Updated 15 ಮೇ 2025, 16:13 IST
ಮಸ್ಕಿ ತಾಲ್ಲೂಕಿನ ಅಂಚೆ ಕಚೇರಿ ಆವರಣದಲ್ಲಿ ನಿಂತ ಮಳೆ ನೀರು
ಮಸ್ಕಿ ತಾಲ್ಲೂಕಿನ ಅಂಚೆ ಕಚೇರಿ ಆವರಣದಲ್ಲಿ ನಿಂತ ಮಳೆ ನೀರು    

ರಾಯಚೂರು: ರಾಯಚೂರು ನಗರ, ಮಸ್ಕಿ, ಕವಿತಾಳ ಗುರುವಾರ ಸಾಧಾರಣ ಮಳೆಯಾಗಿದೆ.

ಮಸ್ಕಿಯಲ್ಲಿ ಬೆಳಿಗ್ಗೆ ಅರ್ಧ ಗಂಟೆಸುರಿದ ಮಳೆ ಯಿಂದ ವಿದ್ಯುತ್ ಸಂಪರ್ಕ ಸ್ಥಗಿತ, ರಸ್ತೆ ಮೇಲೆ ಕೆಲಕಾಲ ನೀರು ಹರಿಯಿತು. ವಾಹನ ಸವಾರರು ಪರದಾಡಿದರು. ಅಂಚೆ ಕಚೇರಿ ಜಲಾವೃತವಾಗಿತ್ತು.

ಸಿರವಾರ ಸಾಧಾರಣ ಮಳೆಯಾಗಿದೆ. ಮಾನ್ವಿ, ದೇವದುರ್ಗ ತಾಲ್ಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ. ರಾಯಚೂರು ನಗರದಲ್ಲಿ ಬೆಳಿಗ್ಗೆ ಸುಡು ಬಿಸಲಿನಿಂದ ಕೆಂಗೆಟ್ಟಿದ್ದ ಜನರಿಗೆ ಸಂಜೆ 20 ನಿಮಿಷ ಸುರಿದ ಸಾಧಾರಣ ಮಳೆಗೆ ತಂಪೆರೆಯಿತು. ಜಿಲ್ಲೆಯಲ್ಲಿ ಕೆಲಕಡೆ ಮೋಡ ಕವಿ ವಾತಾವರಣವಿತ್ತು.

ADVERTISEMENT

ಸಿಂಧನೂರು, ಲಿಂಗಸುಗೂರು, ಜಾಲಹಳ್ಳಿ, ಹಟ್ಟಿ ಮಳೆ ಆಗಲಿಲ್ಲ. ಸುಡು ಬಿಸಿಲು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.