ಮಸ್ಕಿ: ನಾರಾಯಣಪುರ ಬಲದಂಡೆ ಕಾಲುವೆಯ 5(ಎ) ಉಪ ಕಾಲುವೆಯ ಡಿಪಿಆರ್ ಮುಗಿಸಿ ಶೀಘ್ರ ನೀರಾವರಿ ಯೋಜನೆ ಜಾರಿಗೆ ಕ್ರಮಕೈಗೊಳ್ಳುವಂತೆ ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಅವರು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತಾ, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಹೇಶ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನಲ್ಲಿ ನಂದವಾಡಗಿ ಏತ ನೀರಾವರಿ, 5(ಎ) ಉಪ ಕಾಲುವೆ ಸೇರಿದಂತೆ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಅವರು ನಡೆಸಿದರು.
‘ನಾರಾಯಣಪುರ ಬಲದಂಡೆಯ 5 (ಎ) ಕಾಲುವೆ ಡಿಪಿಆರ್ ಸರ್ವೇ ಮುಗಿದಿದೆ. ಶೀಘ್ರ ವರದಿ ತರಿಸಿಕೊಂಡು ಯೋಜನೆ ಜಾರಿಗೆ ಕ್ರಮಕೈಗೊಳ್ಳಬೇಕು. 5(ಎ) ಉಪ ಕಾಲುವೆಯಿಂದ ಮಸ್ಕಿ ಕ್ಷೇತ್ರದ ಪಾಮನಕೆಲ್ಲೂರು, ವಟಗಲ್, ಅಮೀನಗಡ ಸೇರಿದಂತೆ ಅನೇಕ ಹಳ್ಳಿಗಳು ನೀರಾವರಿ ಸೌಲಭ್ಯ ಹೊಂದಲಿವೆ. ಇದರಿಂದ ಜನ ಕೆಲಸ ಹುಡುಕಿ ಗುಳೆ ಹೋಗುವುದು ತಪ್ಪುತದೆ’ ಎಂದು ತಿಳಿಸಿದರು.
ಕೃಷ್ಣಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.