ADVERTISEMENT

ವೀರಶೈವ ಸಮಾಜದ ಬೃಹತ್ ಪ್ರತಿಭಟನೆ

ಹುಮನಾಬಾದ್ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೇಲೆ ನಡೆದ ಹಲ್ಲೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 2:59 IST
Last Updated 5 ಫೆಬ್ರುವರಿ 2022, 2:59 IST
ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಸಿಂಧನೂರಿನಲ್ಲಿ ತಾಲ್ಲೂಕು ಘಟಕದ ವೀರಶೈವ ಸಂಘ, ಜಂಗಮ ಸಮುದಾಯ ಹಾಗೂ ಸಮಸ್ತ ವೀರಶೈವ ಸಮುದಾಯದಿಂದ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು
ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಸಿಂಧನೂರಿನಲ್ಲಿ ತಾಲ್ಲೂಕು ಘಟಕದ ವೀರಶೈವ ಸಂಘ, ಜಂಗಮ ಸಮುದಾಯ ಹಾಗೂ ಸಮಸ್ತ ವೀರಶೈವ ಸಮುದಾಯದಿಂದ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು   

ಸಿಂಧನೂರು: ಹುಮನಾಬಾದ್ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸೇರಿ ರಾಜ್ಯದಲ್ಲಿ ವೀರಶೈವ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಖಂಡಿಸಿ ತಾಲ್ಲೂಕು ಘಟಕದ ವೀರಶೈವ ಸಂಘ, ಜಂಗಮ ಸಮುದಾಯ ಹಾಗೂ ಸಮಸ್ತ ವೀರಶೈವ ಸಮುದಾಯದಿಂದ ಶುಕ್ರವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಹಶೀಲ್ದಾರ್ ಕಚೇರಿಯ ಮುಂದೆ ಹಾಕಲಾಗಿದ್ದ ಶಾಮಿಯಾನದಲ್ಲಿ ಕುಳಿತ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೆಂಕಟರಾವ ನಾಡಗೌಡ, ಹುಮನಾಬಾದ್ ತಹಶೀಲ್ದಾರ್ ಪ್ರದೀಪಕುಮಾರ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ಒಬ್ಬ ತಾಲ್ಲೂಕು ದಂಡಾಧಿಕಾರಿ ಮೇಲೆ ಮಾಡಿದ ಗುಂಡಾ ವರ್ತನೆ ಅಕ್ಷಮ್ಯ ಅಪರಾಧ. ಅಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಮಾತನಾಡಿ, ಈ ಪ್ರತಿಭಟನೆ ಯಾವ ಸಂಘಟನೆ, ಜಾತಿ ಮತ್ತು ಧರ್ಮದ ವಿರುದ್ಧವಲ್ಲ. ಯಾರ ಮೇಲೆಯೂ ಹಲ್ಲೆ, ದೌರ್ಜನ್ಯ ನಡೆಯಬಾರದು. ಈ ಘಟನೆಯಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುತ್ತಿದೆ ಎಂದರು.

ADVERTISEMENT

ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಹಲ್ಲೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ವೆಂಕಟಗಿರಿ ಕ್ಯಾಂಪ್‍ನ ಸದಾನಂದ ಸ್ವಾಮೀಜಿ, ಅಮರಯ್ಯಸ್ವಾಮಿ ಅಲಬನೂರು, ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡ್ರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ವೀರಶೈವ ಸಮುದಾಯ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ವೀರಶೈವ ಮಹಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಜವಳಿ, ಎನ್.ಅಮರೇಶ, ಜಂಗಮ ಸಮುದಾಯದ ಅಧ್ಯಕ್ಷ ಮಲ್ಲಿನಾಥಶಾಸ್ತ್ರಿ, ಹಂಪಯ್ಯಸ್ವಾಮಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ವೀರಶೈವ ಸಮುದಾಯ ಯುವ ಘಟಕ ಅಧ್ಯಕ್ಷ ಶಿವರಾಜ ಪಾಟೀಲ್, ಬಸವರಾಜಸ್ವಾಮಿ ಹಸಮಕಲ್, ರವಿ ಹಿರೇಮಠ, ಸರಸ್ವತಿ ಪಾಟೀಲ್, ಮಮತಾ ಹಿರೇಮಠ, ಜಿ.ಜೆ.ದೇವಿರಮ್ಮ, ದೊಡ್ಡನಗೌಡ ಕಲ್ಲೂರು, ಆದಿಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.