ರಾಯಚೂರು: ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದ ಯೋಗೀಂದ್ರ ಸಭಾಮಂಟಪದಲ್ಲಿ ನಡೆದ ಸಮಾರಂಭದಲ್ಲಿ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಇಬ್ಬರು ಸಾಧಕರಿಗೆ ‘ರಾಘವೇಂದ್ರ ಅನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟಿ ಪಂಡಿತ ರಾಜಾರಾಮ ಶುಕ್ಲ ಅವರಿಗೆ ₹1.50 ಲಕ್ಷ ನಗದು ಹಾಗೂ ರಾಘವೇಂದ್ರ ಅನುಗ್ರಹ ಪ್ರಶಸ್ತಿ, ಕೊಯಮತ್ತೂರಿನ ಲೆಕ್ಕ ಪರಿಶೋಧಕ ಪಿ.ಆರ್.ವಿಠ್ಠಲ್ ಅವರಿಗೆ ₹1 ಲಕ್ಷ ನಗದು ಹಾಗೂ ರಾಘವೇಂದ್ರ ಅನುಗ್ರಹ ಪ್ರಶಸ್ತಿ, ಶಾಲು ಫಲಮಂತ್ರಾಕ್ಷತೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು,‘ರಾಘವೇಂದ್ರ ಸ್ವಾಮಿಗಳು ತಮ್ಮ ಯೋಗಶಕ್ತಿಯಿಂದ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ನಾಸ್ತಿಕ ಜಗತ್ತಿನಲ್ಲಿಯೂ ಆಸ್ತಿಕತೆಯನ್ನು ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಹಿರಿಯ ಪಂಡಿತ ರಾಜಾ ಗಿರಿಯಾಚಾರ್, ನಿವೃತ್ತ ನ್ಯಾಯಾಧೀಶ ಶ್ರೀಧರ, ಸಹಾಯಕ ಆಡಳಿತ ಅಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವಾದಿರಾಜಾಚಾರ್ ಹಾಗೂ ಗೌತಮಾಚಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.