ರಾಯಚೂರು: 'ನಗರದ ಪ್ರತಿಯೊಬ್ಬರು ಒಂದು ಸಸಿ ನೆಟ್ಟು ರಾಯಚೂರು ನಗರವನ್ನು ಹಸಿರೀಕರಣವನ್ನಾಗಿ ಮಾಡಲು ಮುಂದಾಗಬೇಕು’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
ಇಲ್ಲಿಯ ಕೃಷಿ ತಂತ್ರಜ್ಞರ ಸಂಸ್ಥೆಯ ಆವರಣದಲ್ಲಿ ಕೃಷಿ ತಂತ್ರಜ್ಞಾನ ಸಂಸ್ಥೆ, ಗ್ರೀನ್ ರಾಯಚೂರು, ಅರಣ್ಯ ಇಲಾಖೆ, ಕೃಷಿ ಇಲಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ರಾಯಚೂರು ಹಸಿರೀಕರಣ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಗಮೇಶ, ಕಮಲ ಜೈನ್, ಅರಣ್ಯ ಇಲಾಖೆ ಉಪನಿರ್ದೇಶಕ ಪ್ರವೀಣ, ರಾಜೇಂದ್ರ ಹೆಗಡೆ, ಬಿ. ವಿ. ಪಾಟೀಲ, ಎಂ. ಭೀಮಣ್ಣ, ಆರ್. ಎ. ಪಾಟೀಲ, ಎಸ್. ಎಸ್. ಪಾಟೀಲ, ವಿ. ಎ. ಬಾವಲತ್ತಿ ಉಪಸ್ಥಿತರಿದ್ದರು.
ಶರಣಗೌಡ ಸ್ವಾಗತಿಸಿದರು. ಅಂಬರೀಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.