ಪ್ರಾತಿನಿಧಿಕ ಚಿತ್ರ
ಕೊಪ್ಪಳ/ ರಾಯಚೂರು: ಕಲ್ಯಾಣ ಕರ್ನಾಟಕದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಭಾನುವಾರ ಮಳೆಯಾಗಿದೆ.
ಕೊಪ್ಪಳದಲ್ಲಿ ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆ ಚುರುಕಾಗಿದ್ದು, ಕೊಪ್ಪಳ ನಗರ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳು ಹಾಗೂ ಗಂಗಾವತಿಯಲ್ಲಿ ಮಳೆ ಸುರಿದಿದೆ.
ಮಳೆ ಕೊರತೆಯಿಂದ ಬರಗಾಲದ ಆತಂಕ ಮನೆ ಮಾಡಿತ್ತು. ಉತ್ತಮ ಮಳೆ ರೈತರಲ್ಲಿ ಖುಷಿಯ ಭಾವ ಮೂಡಿಸಿದೆ. ಈಗಾಗಲೇ ಆಗಿರುವ ಬಿತ್ತನೆಗೂ
ಅನುಕೂಲವಾಗಲಿದೆ.
ತಾಲ್ಲೂಕಿನ ಅಳವಂಡಿ ಸಮೀಪದ ಬಿಕನಹಳ್ಳಿ ಗ್ರಾಮದಿಂದ ಕೊಪ್ಪಳ–ಅಳವಂಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಕ್ರಾಸ್ ತನಕದ ರಸ್ತೆಯಲ್ಲಿ ಮಧ್ಯದಲ್ಲಿರುವ ಹಳ್ಳ ತುಂಬಿ ಹರಿದಿದ್ದು ಹಳ್ಳದಾಟಲು ಜನ ಪರದಾಡಿದರು.
ರಾಯಚೂರು ನಗರದಲ್ಲಿ ಅರ್ಧ ಗಂಟೆ ಧಾರಾಕಾರ ಮಳೆಯಾಗಿದೆ. ಮಾನ್ವಿ, ದೇವದುರ್ಗ, ಜಾಲಹಳ್ಳಿಯಲ್ಲೂ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ರಸ್ತೆ ಮೇಲೆ ನೀರು ಹರಿಯಿತು.
ಜಿಲ್ಲೆಯಲ್ಲಿ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾ
ಲಯದ ಗ್ರಾಮೀಣ ಹವಾಮಾನ ಘಟಕ ಮುನ್ಸೂಚನೆ ನೀಡಿದೆ.
ಮಡಿಕೇರಿಯಲ್ಲಿ ಮಳೆ: ನಗರದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆಗೆ ಮಳೆ ಸುರಿಯಿತು.
ಭಾಗಮಂಡಲದಲ್ಲಿ 4 ಸೆಂ.ಮೀ., ಮಡಿಕೇರಿ 3.5,
ಸುಂಟಿಕೊಪ್ಪದಲ್ಲಿ 3 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.