ADVERTISEMENT

ಕವಿತಾಳ: ತಂಪೆರದ ಮಳೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:00 IST
Last Updated 15 ಮೇ 2025, 14:00 IST
ಕವಿತಾಳ ಸಮೀಪದ ಹರ್ವಾಪುರ ಸಮೀಪ ಜಮೀನಿನಲ್ಲಿ ನೀರು ನಿಂತಿರುವುದು
ಕವಿತಾಳ ಸಮೀಪದ ಹರ್ವಾಪುರ ಸಮೀಪ ಜಮೀನಿನಲ್ಲಿ ನೀರು ನಿಂತಿರುವುದು   

ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಆಗಾಗ ಸಾಧಾರಣ ಮಳೆ ಸುರಿದಿದೆ.

ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಅರ್ಧ ಗಂಟೆ ಕಾಲ ಸುರಿದ ಸಾಧಾರಣ ಮಳೆಯಿಂದ ವಾತಾವರಣದಲ್ಲಿ ಸ್ವಲ್ಪ ಮಟ್ಟಿಗೆ ತಂಪಾದರೂ ಮಳೆ ನಿಂತ ಬಳಿಕ ಬಿಸಿಲು ಹೆಚ್ಚಿದ ಪರಿಣಾಮ ತಾಪಮಾನ ಹೆಚ್ಚಾಯಿತು. ಸಂಜೆ ವೇಳೆಗೆ ಮತ್ತೆ ಮೋಡ ಕವಿದ ವಾತಾವರಣ ಉಂಟಾಗಿ ಜಿಟಿಜಿಟಿ ಮಳೆ ಸುರಿಯಿತು.

ಮಳೆ ಸುರಿದ ಪರಿಣಾಮ ಇಲ್ಲಿನ ಮುಖ್ಯ ರಸ್ತೆಯಲ್ಲಿನ ದೂಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಸಾರ್ವಜನಿಕರು ವಾಹನ ಸವಾರರು ನಿಟ್ಟುಸಿರು ಬಿಟ್ಟರು.

ADVERTISEMENT

ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ವಿಭಜಕ ತೆರವುಗೊಳಿಸಿ ಅದರ ಮಣ್ಣನ್ನು ರಸ್ತೆಗೆ ಹರಡಲಾಗಿದೆ ಹೀಗಾಗಿ ಸ್ವಲ್ಪ ಮಳೆ ಸುರಿದರೂ ರಸ್ತೆ ಪೂರ್ತಿ ಕೆಸರು ಮಯವಾಗುತ್ತಿದೆ, ವಾಹನಗಳು ಸಂಚರಿಸಿದಂತೆಲ್ಲಾ ಪಾದಾಚಾರಿಗಳಿಗೆ ಗಲೀಜು ನೀರು ಸಿಡಿಯುವಂತಾಗಿದೆ.

ಇಲ್ಲಿಗೆ ಸಮೀಪದ ಹುಸೇನಪುರ, ಕಡ್ಡೋಣಿ, ಬೆಂಚಮರಡಿ ಮತ್ತು ಹರ್ವಾಪುರ ಮತ್ತಿತರ ಕಡೆ ಜೋರು ಮಳೆಯಾಗಿದೆ ಹೀಗಾಗಿ ಅಲ್ಲಲ್ಲಿ ಜಮೀನುಗಳಲ್ಲಿ ನೀರು ನಿಂತ ದೃಶ್ಯ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.