ADVERTISEMENT

ರಾಯರ ಆರಾಧನೆ: ಮನೆ ಮನೆಗೆ ಉತ್ಸವ ಮೂರ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:58 IST
Last Updated 19 ಜುಲೈ 2025, 6:58 IST
ಲಿಂಗಸುಗೂರು ಪಟ್ಟಣದ ಮನೆ ಮನೆಗೆ ರಾಯರ ಉತ್ಸವ ಮೂರ್ತಿಯೊಂದಿಗೆ ತೆರಳಿ ಪೂಜೆ ಸಲ್ಲಿಸಲಾಯಿತು
ಲಿಂಗಸುಗೂರು ಪಟ್ಟಣದ ಮನೆ ಮನೆಗೆ ರಾಯರ ಉತ್ಸವ ಮೂರ್ತಿಯೊಂದಿಗೆ ತೆರಳಿ ಪೂಜೆ ಸಲ್ಲಿಸಲಾಯಿತು   

ಲಿಂಗಸುಗೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಅಂಗವಾಗಿ ಪಟ್ಟಣದಲ್ಲಿ ಮನೆ ಮನೆಗೆ ರಾಯರ ಉತ್ಸವ ಮೂರ್ತಿಯೊಂದಿಗೆ ತೆರಳಿ ಪೂಜೆ ಮಾಡುವ ಕಾರ್ಯಕ್ರಮಕ್ಕೆ ಶುಕ್ರವಾರದಿಂದ ಚಾಲನೆ ನೀಡಲಾಯಿತು.

ಆಗಸ್ಟ್‌ 10 ರಿಂದ 12ರವರೆಗೆ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ ಅಂಗವಾಗಿ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಯೂ ಆರಾಧನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಅದರ ಪ್ರಯುಕ್ತ ರಾಯರ ಉತ್ಸವ ಮೂರ್ತಿಯೊಂದಿಗೆ ಗುರುರಾಜ ಭಜನಾ ಮಂಡಳಿ ಸದಸ್ಯರು ಪಟ್ಟಣದ ವಿವಿಧ ಮನೆ ಮನೆಗೆ ತೆರಳಿ ಪೂಜೆ ಸಲ್ಲಿಸಿದರು.

ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ ದಿಗ್ಗಾವಿ, ಮಠದ ವ್ಯವಸ್ಥಾಪಕ ಜಯರಾಮ್ ಆಚಾರ್ಯ, ಅರ್ಚಕ ಪವನ ಆಚಾರ್ಯ, ಹನುಮೇಶ ದಾಸ, ಶೇಷಗಿರಿದಾಸ, ವರದೇಂದ್ರ ಐದನಾಳ, ರವಿ ಮುತಾಲಿಕ, ಗುರುರಾಜ ತುರ್ವಿಹಾಳ, ಹನುಮೇಶ ಮುತಾಲಿಕ, ಹೃಷಿ ಗೋತಗಿ, ವೆಂಕಟೇಶ ಶಾಸ್ತ್ರೀ, ಪವನಶೆಟ್ಟಿ ತಾವರಗೇರಿ, ತ್ರಿವಿಕ್ರಮ ಜಾಗಿರದಾರ, ವೇಣು, ಶ್ರೀಕರ ಜೋಷಿ, ರಾಜು ದೇಶಪಾಂಡೆ, ಸಮೀರ ಬುರ್ಲಿ, ಧನಂಜಯ ಅರಳಿಕಟ್ಟಿ, ವೈಭವ ಜೋಷಿ ಇನ್ನಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.