ADVERTISEMENT

‘ಎಂ.ವೈ.ಕಾಳೆ ವಿರುದ್ಧದ ಆರೋಪ ನಿರಾಧಾರ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:25 IST
Last Updated 12 ನವೆಂಬರ್ 2019, 17:25 IST

ರಾಯಚೂರು: ದಲಿತ ಹಾಗೂ ಪ್ರಗತಿಪರ ಸಂಘಟನೆಯ ಅಧ್ಯಕ್ಷ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ವೈ.ಕಾಳೆ ಅವರ ವಿರುದ್ಧ ಅವ್ಯವಹಾರ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು ಎಂದು ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿ ಅಧ್ಯಕ್ಷ ರವೀಂದ್ರ ಪಟ್ಟಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಿಂದ ಯಾವುದೇ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕಾದರೆ ಕ್ಷೇತ್ರದ ಶಾಸಕರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಜಿಲ್ಲಾ ವ್ಯವಸ್ಥಾಪಕರಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರ ಇರುವುದಿಲ್ಲ. ಇದನ್ನು ಆರೋಪಿಸಿದವರು ಮೊದಲು ಅರಿತುಕೊಳ್ಳಲಿ. ಎಂ.ವೈ.ಕಾಳೆ ವಿರುದ್ಧ ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಲಾಗುವುದು’ ಎಂದು ಹೇಳಿದರು.

ಎಂ.ವೈ ಕಾಳೆ ಅವರಿಗೆ ಫೋನ್ ಕರೆ ಮಾಡಿ ₹ 40 ಲಕ್ಷ ಕೊಡಬೇಕು. ಇಲ್ಲದಿದ್ದಲ್ಲಿ ನಿಮ್ಮ ವರ್ಗಾವಣೆ ಮಾಡಿಸು ತ್ತೇನೆಂದುಬಸವರಾಜ ನಕ್ಕುಂದಿ ಅವರು ಕೆಲ ದಿನಗಳ ಹಿಂದೆ ಬೆದರಿಕೆ ಕರೆ ಮಾಡಿದ್ದು, ಪರಸ್ಪರ ಮಾತನಾಡಿರುವ ಧ್ವನಿ ಸುರುಳಿಯ ತುಣುಕಿನ ಸಿ.ಡಿಯನ್ನು ಪ್ರದರ್ಶಿಸಿದರು. ಈ ಸಂಭಾಷಣೆ ಧ್ವನಿಸುರುಳಿ ಇಟ್ಟುಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು

ADVERTISEMENT

ವಿಶ್ವನಾಥ್ ಪಟ್ಟಿ ಮಹೇಶ, ಮಾರೆಪ್ಪ, ಮುತ್ತುರಾಜ್, ತಿಮ್ಮಪ್ಪ, ಕೆ.ಈ. ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.