ADVERTISEMENT

ಭಕ್ತರ ಹೃಣ್ಮನ ಸೆಳೆದ ಶಿವತಾಂಡವ ನೃತ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 12:26 IST
Last Updated 4 ಮಾರ್ಚ್ 2019, 12:26 IST
ಸಿಂಧನೂರು ತಾಲ್ಲೂಕಿನ ಗಾಂಧಿನಗರ ಗ್ರಾಮದ ಶಿವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜ ನೇತೃತ್ವದ ಕಲಾ ತಂಡವು ಶಿವತಾಂಡವ ನೃತ್ಯ ರೂಪಕವನ್ನು ಪ್ರದರ್ಶಿಸಿತು 
ಸಿಂಧನೂರು ತಾಲ್ಲೂಕಿನ ಗಾಂಧಿನಗರ ಗ್ರಾಮದ ಶಿವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜ ನೇತೃತ್ವದ ಕಲಾ ತಂಡವು ಶಿವತಾಂಡವ ನೃತ್ಯ ರೂಪಕವನ್ನು ಪ್ರದರ್ಶಿಸಿತು    

ಸಿಂಧನೂರು: ತಾಲ್ಲೂಕಿನ ಗಾಂಧಿನಗರ ಗ್ರಾಮದ ಶಿವಾಲಯದಲ್ಲಿ ಸೋಮವಾರ ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜ ನೇತೃತ್ವದ ಮೆಖಲ ಭರಧ್ವಾಜ್ ತಂಡದಿಂದ ನಡೆದ ಶಿವತಾಂಡವ ಮತ್ತು ವೈವಿಧ್ಯಮಯ ನೃತ್ಯ ರೂಪಕಗಳು ಭಕ್ತರ ಕಣ್ಮನ ಸೆಳೆದವು.

ಶಿವತಾಂಡವ ನೃತ್ಯವನ್ನು ನೋಡಲು ಬಂದಿದ್ದ ಹಲವಾರು ಭಕ್ತರು ಶಿವನ ತಾಂಡವ ನೃತ್ಯವನ್ನು ಭಕ್ತಿಭಾವದಿಂದ ಕಣ್ತುಂಬಿಕೊಂಡರು. ಮೇಖಲ ಭಾರಧ್ವಾಜ ಹಾಗೂ ತಂಡದವರು ಶಿವನ ವಿವಿಧ ಲೀಲೆ, ಪರಾಕ್ರಮ ಮತ್ತು ಪವಾಡಗಳನ್ನು ನೃತ್ಯ ರೂಪಕದಲ್ಲಿ ಹಲವು ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯದ ಮೂಲಕ ಭಕ್ತರಿಗೆ ತಿಳಿಸಿಕೊಟ್ಟರು.

ಬೆಳಗೆರೆ ಗೌರಿ ನಾಗರಾಜ ನೇತೃತ್ವದ ಮೆಖಲ ಭರಧ್ವಾಜ್ ತಂಡದವರು ಗೆಜ್ಜೆ ನುಡಿಸುತ್ತಾ ವೇದಿಕೆಗೆ ಬರುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಪರಶಿವನ ಭಕ್ತಿಗೀತೆಗಳಿಗೆ ಅನುಗುಣವಾಗಿ ಕಲಾವಿದೆಯರು ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮೂಖವಿಸ್ಮಿತರನ್ನಾಗಿಸಿದ್ದರು. ವೇದಿಕೆಯ ಮೇಲೆ ಕಲಾವಿದೆಯರು ನೃತ್ಯ ಮಾಡುತ್ತಿರುವಾಗ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಕೆಲ ಯುವತಿಯರು ತಾವು ಸಹ ಎದ್ದು ನಿಂತು ಅವರೊಂದಿಗೆ ಹಾವಭಾವಗಳನ್ನು ವ್ಯಕ್ತಪಡಿಸುತ್ತಾ ಕಲಾವಿದರನ್ನು ಹುರುದುಂಬಿಸಿದರು.

ADVERTISEMENT

’ಪರಮಾತ್ಮನ ಇಂತಹ ಪವಾಡಗಳು ಮತ್ತು ಕಥೆಗಳನ್ನು ನೃತ್ಯರೂಪಕದಲ್ಲಿ ನನ್ನ ಜೀವನದಲ್ಲಿ ಮೊದಲ ಬಾರಿ ನೋಡಿದೆ. ಆ ಶಿವನು ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ, ಸಾಮರಸ್ಯ, ಸೌಹಾರ್ದತೆಯಿಂದ ಬದುಕುವಂತೆ ಕರುಣಿಸಲಿ’ ಎಂದು ಗಾಂಧಿನಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಪಿ ಹೇಳಿದರು.

ವಿಶ್ವೇಶ್ವರ ಪಂಚಾಯಿತಿ ಕ್ಷೇತ್ರದ ಅಧ್ಯಕ್ಷ ಸುಬ್ಬಾರಾವ್ ಮಾತನಾಡಿ, ‘ಶ್ರೀರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜ ಅವರು ‘ಶಿವತಾಂಡವ ಮತ್ತು ವೈವಿಧ್ಯಮಯ ನೃತ್ಯರೂಪಕ ಪ್ರದರ್ಶನಕ್ಕೆ ಅವಕಾಶ ನೀಡುವ ಮೂಲಕ ಈ ಭಾಗದ ಜನರಿಗೆ ಶಿವ ವೈಭವವನ್ನು ಅನಾವರಣಗೊಳಿಸಿದ್ದಾರೆ. ಮುಂದಿನ ವರ್ಷವೂ ಸಹ ಅವರು ಶಿವಾಲಯಕ್ಕೆ ಆಗಮಿಸಬೇಕು’ ಎಂದು ವಿನಂತಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.