ಮುದಗಲ್: ಮೊಹರಂ ಹಬ್ಬದ ಪ್ರಯುಕ್ತ ಹುಸೇನಿ ಆಲಂ ದರ್ಗಾಕ್ಕೆ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಮೊಹರಂ ಹಬ್ಬವು ಹಿಂದೂ ಮುಸ್ಲಿಂ ಸಮುದಾಯದಗಳು ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸುತ್ತಾರೆ. ಹಬ್ಬದ ನಿಮಿತ್ತ ಭದ್ರತೆಗಾಗಿ ಇಬ್ಬರು ಡಿವೈಎಸ್‌ಪಿ, 10 ಜನ ಸಿಪಿಐ, 20 ಜನ ಪಿಎಸ್‌ಐ, 34 ಜನ ಎಎಸ್‌ಐ, 86 ಹೆಡ್ ಕಾನ್‌ಸ್ಟೆಬಲ್, 130 ಕಾನ್‌ಸ್ಟೆಬಲ್‌ಗಳು, 112 ಗೃಹ ರಕ್ಷದ ದಳದ ಸಿಬ್ಬಂದಿ, 46 ಮಹಿಳಾ ಕಾನ್ ಸ್ಟೆಬಲ್‌ಗಳು, ಎರಡು ಕೆಎಸ್‌ಆರ್‌ಪಿ ಹಾಗೂ ಎರಡು ಸಿಆರ್‌ಪಿ ತುಕಡಿಗಳು ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಕಳ್ಳತನ ತಡೆಯಲು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದೇವೆ. ಅವಶ್ಯಕತೆ ಇದ್ದಲ್ಲಿ ಡ್ರೋನ್ ಕ್ಯಾಮರಾ ಬಳಕೆ ಮಾಡುತ್ತೇವೆ’ ಎಂದರು.
ಈ ವೇಳೆ ಲಿಂಗಸುಗೂರು ಡಿವೈಎಸ್‌ಪಿ ದತ್ರಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ, ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಗೇರಿ, ಪುರಸಭೆ ಸದಸ್ಯ ಶೇಖ ರಸೂಲ್, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ, ಹುಸೇನಿ ಆಲಂ ದುರ್ಗಾ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಕಾರ್ಯದರ್ಶಿ ಸಾಧಿಕ್ ಅಲಿ, ಗಯಾಸುದ್ದಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.