ADVERTISEMENT

ಟಿಪ್ಪು ಜಯಂತಿ: ಹೈ.ಕ.ದಲ್ಲಿ ನಿರ್ಬಂಧ ಬೇಡ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 11:09 IST
Last Updated 7 ನವೆಂಬರ್ 2018, 11:09 IST
ಆರ್‌. ಮಾನಸಯ್ಯ
ಆರ್‌. ಮಾನಸಯ್ಯ   

ರಾಯಚೂರು: 'ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಹೀಗಾಗಿ ನವೆಂಬರ್‌ 10 ರಂದು ಟಿಪ್ಪು ಸುಲ್ತಾನ್‌ ಜಯಂತಿ ಸಂಘ–ಸಂಸ್ಥೆಗಳು ಆಚರಿಸಬಾರದು ಎಂದು ಸರ್ಕಾರವು ಹಾಕಿರುವ ನಿರ್ಬಂಧವನ್ನು ಕನಿಷ್ಠ ಪಕ್ಷ ಈ ಜಿಲ್ಲೆಗಳಲ್ಲಿ ಕೈಬಿಡಬೇಕು' ಎಂದು ಕಾರ್ಮಿಕರ ಪರ ಹೋರಾಟಗಾರ ಆರ್‌. ಮಾನಸಯ್ಯ ಕೋರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೇಶಕ್ಕಾಗಿ ಪ್ರಾಣಕೊಟ್ಟಿರುವ ಮಹನೀಯರ ಜಯಂತಿಗಳನ್ನು ಎಡಪಕ್ಷಗಳು ನಿರಂತರ ಆಚರಿಸುತ್ತಾ ಬಂದಿವೆ. ಟಿಪ್ಪು ಸುಲ್ತಾನ್‌ ಕೇವಲ ಮುಸಲ್ಮಾನರಿಗೆ ಸಿಮೀತವಾಗಿಲ್ಲ. ದೇಶ ರಕ್ಷಣೆಗೆ ಬ್ರಿಟಿಷರ ವಿರುದ್ಧ ರಾಜಿಯಿಲ್ಲದೆ ಹೋರಾಟ ಮಾಡಿದಲ್ಲದೆ, ತನ್ನ ಮಕ್ಕಳನ್ನು ಒತ್ತೆ ಇಟ್ಟಿದ್ದ ಶೂರ ಟಿಪ್ಪು ಸುಲ್ತಾನ. ಟಿಪ್ಪು ಜಯಂತಿ ಆಚರಣೆಗೆ ಈ ಭಾಗದ ಜಿಲ್ಲೆಗಳಲ್ಲಿ ಇವರೆಗೂ ಯಾರೂ ಅಡ್ಡಿಪಡಿಸಿಲ್ಲ. ಸರ್ಕಾರದಿಂದ ಜಯಂತಿ ಆಚರಿಸಲು ವಿರೋಧ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT