ADVERTISEMENT

ಪರೀಕ್ಷಾ ಪ್ರಕ್ರಿಯೆ ಸ್ಥಗಿತಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 12:18 IST
Last Updated 17 ಫೆಬ್ರುವರಿ 2021, 12:18 IST
ರಾಯಚೂರಿನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ಐಟಿಐ ತರಬೇತಿದಾರರ ಪರಿಕ್ಷಾ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್‌ಆರ್ಗನೈಸೇಶನ್ (ಎಐಡಿವೈಒ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಡಳಿತದ ಮೂಲಕ ಕೈಗಾರಿಕಾ ತರಬೇತಿಯ ರಾಜ್ಯ ಆಯುಕ್ತರಿಗೆ ಮನವಿ ಸಲ್ಲಿಸಿದರು. ಕೋವಿಡ್ ಕಾರಣದಿಂದ 2019 ಆಗಸ್ಟ್ ತಿಂಗಳಲ್ಲಿ ಪ್ರವೇಶ ಪಡೆದ ಕೈಗಾರಿಕಾ ತರಬೇತಿ ಕೇಂದ್ರ ( ಐಟಿಐ)ದ ತರಬೇತಿದಾರರಿಗೆ ಪರೀಕ್ಷೆ ಇರುವುದಿಲ್ಲ. ಪ್ರಥಮ ವರ್ಷದಿಂದ ದ್ವಿತಿಯ ವರ್ಷಕ್ಕೆ ಪ್ರಮೋಟ್ ಮಾಡುವುದಾಗಿ ಕೇಂದ್ರದ ಡೈರೆಕ್ಟ್ ಜನರಲ್ ಆಫ್ ಟ್ರೈನಿಂಗ್ (ಡಿಜಿಟಿ) ವತಿಯಿಂದ ಫೆಬ್ರುವರಿ 5ರಂದು ಆದೇಶ ನೀಡಿದ್ದರು. ಆದರೆ, ಏಕಾಏಕಿ ಕೇವಲ 5 ದಿನಗಳ ನಂತರ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದು ಖಂಡನೀಯ.

ಆದೇಶವನ್ನು ಮೊದಲನೇ ವರ್ಷದ ಐಟಿಐ ತರಬೇತಿದಾರರು ಮಾಚ್-2021ರಲ್ಲಿ ಪರೀಕ್ಷೆಯನ್ನು ನಡೆಸಬೇಕು. ಆ ಆದೇಶದಲ್ಲಿ ಪರಿಕ್ಷಾ ವೇಳಾಪಟ್ಟಿಯನ್ನು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ರಾಜ್ಯ ಆಯುಕ್ತರು ಫೆಬ್ರುವರಿ 17ರೊಳಗೆ ಪರೀಕ್ಷಾ ಶುಲ್ಕ ತುಂಬಬೇಕು ಎಂದು ಆದೇಶ ನೀಡಿದ್ದು ತರಬೇತಿದಾರರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದರು.

ADVERTISEMENT

ಎರಡು ಆದೇಶಗಳು ಪರಸ್ಪರ ಒಂದಕ್ಕೊಂದು ತದ್ವಿರುದ್ಧವಾಗಿವೆ. ಗೊಂದಲ ಹಾಗೂ ದಿಢೀರ್ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಸುಮಾರು 10 ತಿಂಗಳು ತರಬೇತಿ ಕಳೆದುಕೊಂಡಿದ್ದಾರೆ. ಯಾವುದೇ ತರಬೇತಿ, ಪಾಠಗಳು ನಡೆಯದೇ ಇದ್ದರೂ ಪರೀಕ್ಷೆ ನಡೆಸುವುದು ಅಸಮಂಜಸ. ತಕ್ಷಣದಲ್ಲಿ ಶುಲ್ಕಪಾವತಿ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ತರಬೇತಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ. ಕೂಡಲೇ ತರಬೇತಿ ಸಂಸ್ಥೆಯವರಲ್ಲಿ ಮೂಡಿರುವ ಗೊಂದಲ ಹಾಗೂ ಆತಂಕ ದೂರ ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್, ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ, ತರಬೇತಿದಾರ ವಿಕಾಸ್, ಆಥರ್ವ, ಮಹೆಬೂಬ್, ಭೀಮೇಶ, ಸುನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.