ADVERTISEMENT

ಅಡಿಕೆ ಮರಕ್ಕೆ ಕೊಡಲಿ ದಲಿತರ ಮೇಲೆ ಆರೋಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 10:20 IST
Last Updated 11 ಡಿಸೆಂಬರ್ 2017, 10:20 IST
ಮಾಗಡಿ ತಾಲ್ಲೂಕಿನ ನಾಗಶೆಟ್ಟಿ ಹೊನ್ನಬಸವಯ್ಯ ಅವರ ಅಡಿಕೆ ಮರ ಕತ್ತರಿಸಿದ್ದಾರೆ
ಮಾಗಡಿ ತಾಲ್ಲೂಕಿನ ನಾಗಶೆಟ್ಟಿ ಹೊನ್ನಬಸವಯ್ಯ ಅವರ ಅಡಿಕೆ ಮರ ಕತ್ತರಿಸಿದ್ದಾರೆ   

ಮಾಗಡಿ: ತಾಲ್ಲೂಕಿನ ನಾಗಶೆಟ್ಟಿ ಹಳ್ಳಿ ಹೊನ್ನಬಸವಯ್ಯ ಅವರ ಸರ್ವೆ ನಂಬರ್‌ 101ರಲ್ಲಿನ ತೋಟದಲ್ಲಿ ಕಿಡಿಗೇಡಿಗಳು ಅಡಿಕೆ ಮತ್ತು ಬಾಳೆಗಿಡ ಕತ್ತರಿಸಿದ್ದಾರೆ.

ನಿವೇಶನಗಳಿಗೆ ಸಂಬಂಧಿಸಿದಂತೆ ದಲಿತರೊಂದಿಗೆ ವ್ಯಾಜ್ಯ ನ್ಯಾಯಾಲಯದಲ್ಲಿದೆ, ದಲಿತರೆ ನಮ್ಮ ತೋಟದಲ್ಲಿನ ಅಡಿಕೆ ಮತ್ತು ಬಾಳೆಗಿಡ ಕತ್ತರಿಸಿರ ಬಹುದು ಎಂದು ಆರೋಪಿಸಿ, ದಲಿತರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ನೀಡುವಂತೆ ಹೊನ್ನಬಸವಯ್ಯ ಠಾಣೆಗೆ ದೂರು ನೀಡಿದ್ದಾರೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ಬಿ.ರವಿ ತಿಳಿಸಿದ್ದಾರೆ.

ದಲಿತರು ದುಡಿದು ಉಂಡವರೆ ವಿನಃ ಯಾರ ಮನೆ ಮತ್ತು ಬೆಳೆ ನಾಶ ಮಾಡಿದವರಲ್ಲ, ಅಡಿಕೆ ಮರ ಕತ್ತರಿಸಿರುವುದಕ್ಕೂ ನಮಗೂ ಸಂಬಂಧವಿಲ್ಲ, ಕೂಲಿನಾಲಿ ಮಾಡಿ ತಿನ್ನುವ ಶೋಷಿತರ ಮೇಲೆ ಏಕೆ ಬ್ರಹ್ಮಾಸ್ತ್ರ ಎಂದು ದಲಿತ ಮುಖಂಡ ಗೋವಿಂದರಾಜು ಪ್ರಶ್ನಿಸಿದ್ದಾರೆ.

ADVERTISEMENT

ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಸಹ ಯಾವ ಅಧಿಕಾರಿಯೂ ಗಮನಹರಿಸುತ್ತಿಲ್ಲ. ‘ಕೂಲಿ ಮಾಡಿ ಊಟ ಮಾಡುವ ನಾವು, ಇನ್ನೊಬ್ಬರ ತೋಟ ಹಾಳು ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.