ADVERTISEMENT

ಆರ್‌ಟಿಇ: ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 10:11 IST
Last Updated 4 ಮಾರ್ಚ್ 2014, 10:11 IST

ರಾಮನಗರ: ‘ದೇಶಕ್ಕೆ ಉತ್ತಮ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಲ್.ಚಂದ್ರಶೇಖರ್ ಹೇಳಿದರು.

ನಗರದ ಗೌಸಿಯಾ ಎಂಜಿನಿ­ಯರಿಂಗ್‌ ಕಾಲೇಜಿನಲ್ಲಿ ಎನ್ಎಸ್‌­ಯುಐ ವತಿ­ಯಿಂದ ಹಮ್ಮಿಕೊಂಡಿದ್ದ ಆರ್‌ಟಿಇ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತೀಕ ಪ್ರಪಂಚದಲ್ಲಿ ದೇಶ ತನ್ನದೇ ಆದ ಸ್ಥಾನ ಪಡೆದು­ಕೊಳ್ಳ­ಬೇಕಾದರೆ ಹಲವು ಸಾಧನೆ ಮಾಡ­ಬೇಕು. ಆದರೆ ಅದರಲ್ಲಿ ವಿದ್ಯಾರ್ಥಿಗಳ ಪಾತ್ರವೂ ಮಹತ್ವದಾಗಿದೆ. ಈ ಹಿನ್ನೆಲೆ­ಯಲ್ಲಿ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆದುಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದರು.

ನಿವೃತ್ತ ವಕೀಲ ತಿಮ್ಮೇಗೌಡ ಮಾತ­ನಾಡಿ, ‘ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಮತ್ತು ಉಚಿತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರ್‌ಟಿಇ ಕಾಯ್ದೆ ತಂದಿದೆ. ಇದರ ಸದುಪಯೋಗ ಆಗಬೇಕು. ಅನ­ರ್ಹ­ರು ಈ ಯೋಜನೆಯನ್ನು ಕಬಳಿ­ಸಲು ಬರಬಾರದು’ ಎಂದು ಮನವಿ ಮಾಡಿದರು.

ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ಅನಿಲ್ ಜೋಗಿಂದರ್ ಮಾತನಾಡಿ, ‘ಕೆಲವು ವಿದ್ಯಾಸಂಸ್ಥೆಗಳು ಅರ್ಹರಿಗೆ ನೀಡ­ಬೇಕಿ­ರುವ ಸೀಟನ್ನು ಶ್ರೀಮಂತರಿಗೆ ನೀಡುತ್ತಿ­ರು­ವುದು ಬೆಳಕಿಗೆ ಬಂದಿದೆ. ಹಾಗಾಗಿಯೇ ರಾಜ್ಯದಾದ್ಯಂತ  ಸಾರ್ವಜನಿಕರಿಗೆ ಅರಿವು ಮೂಡಿಸಲು ಆಂದೋಲನ ನಡೆಸ­ಲಾಗುತ್ತಿದೆ’ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎನ್.ಆರ್.ವೆಂಕ­ಟೇಶ್, ಎನ್ಎಸ್‌ಯುಐ ಜಿಲ್ಲಾ ಕಾರ್ಯ­ದರ್ಶಿ ಗುರುಪ್ರಸಾದ್, ರಾಜ್ಯ ಕಾರ್ಯದರ್ಶಿ ಶಶಿಕುಮಾರ್, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ನೇತ್ರ­ಕುಮಾರ್, ಪದಾಧಿಕಾರಿಗಳಾದ ಚೇತನ್, ಸಾಗರ್, ಚಂದು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.