ADVERTISEMENT

ಎಸ್‌ಪಿಆರ್ ಶುಗರ್ಸ್‌ ಕಾರ್ಖಾನೆ ಪ್ರತಿ ಟನ್‌ಗೆ ರೂ .60 ಹೆಚ್ಚುವರಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 6:15 IST
Last Updated 9 ಜುಲೈ 2013, 6:15 IST

ರಾಮನಗರ: ಪ್ರತಿ ಟನ್ ಕಬ್ಬಿಗೆ ರೂ 100 ಬದಲಿಗೆ 60 ರೂಪಾಯಿ ಹೆಚ್ಚುವರಿ ಹಣ ನೀಡಲು ಬಿಡದಿಯ ಬೈರಮಂಗಲ ಬಳಿಯ ಎಸ್‌ಪಿಆರ್ ಶುಗರ್ಸ್‌ ಲಿಮಿಟೆಡ್‌ನ ಮಾಲೀಕ ಎಸ್.ಪಿ.ತಿಮ್ಮೇಗೌಡ ಒಪ್ಪಿಕೊಂಡಿದ್ದಾರೆ ಎಂದು ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಉಪ ವಿಭಾಗಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ್ಙ 60 ನೀಡಲು ಒಪ್ಪಿಗೆ ಸೂಚಿಸಿದ್ದಾರೆ.  ಇದಕ್ಕೆ ಸಭೆಯಲ್ಲಿದ್ದ ರೈತ ಮುಖಂಡರು ಮತ್ತು ಕಬ್ಬು ನೀಡಿದ್ದ ರೈತರ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

`ಸಭೆಯಲ್ಲಿ 100 ರೂಪಾಯಿ ಹೆಚ್ಚುವರಿ ಹಣ ನೀಡುವಂತೆ ನಾವೆಲ್ಲ ಒತ್ತಾಯಿಸಿದೆವು. ಆದರೆ ಕಾರ್ಖಾನೆ ತುಂಬ ನಷ್ಟದಲ್ಲಿರುವ ಕಾರಣ ಕೊಡುವುದು ಕಷ್ಟ ಎಂದು ಮಾಲೀಕರು ವಾದಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಉಪ ವಿಭಾಗಾಧಿಕಾರಿ ಅವರು ್ಙ 60 ಹೆಚ್ಚುವರಿ ಹಣ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು. ಇದಕ್ಕೆ ಅವರೂ ಒಪ್ಪಿಕೊಂಡರು. ನಾವೂ ಸಮ್ಮತಿಸಿದೆವು' ಎಂದು ಹೇಳಿದರು.

ಕಳೆದ ವಾರ ಹಾರೋಹಳ್ಳಿ ಹೋಬಳಿಯ ಕೊಳಗನಹಳ್ಳಿಯಲ್ಲಿ ನಡೆದಿದ್ದ ಸಭೆಯಲ್ಲಿ ಕಾರ್ಖಾನೆಯ ಮಾಲೀಕರು ರೈತರಿಗೆ ಪಾವತಿಯಾಗಬೇಕಿರುವ ಕಬ್ಬು ಕಟಾವು ಬಾಕಿ ಹಾಗೂ ಕಬ್ಬು ತೂಕ ವ್ಯತ್ಯಾಸದ ಬಾಕಿ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿ ಟನ್‌ಗೆ 100 ರೂಪಾಯಿ ಹೆಚ್ಚುವರಿ ಹಣ ನೀಡುವ ಕುರಿತು ಉಪ ವಿಭಾಗಾಧಿಕಾರಿ ಅವರು ಮಾಲೀಕರಿಗೆ ಕೆಲ ಸಮಯ ಅವಕಾಶ ನೀಡಿದ್ದರು. ಪುನಃ ಸಭೆ ನಡೆದಿದ್ದ್ಙು 60ಕ್ಕೆ ನಿಗದಿಗೊಳಿಸಲಾಯಿತು. ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಬೇಡಿಕೆ ಮತ್ತು ಹಕ್ಕೊತ್ತಾಯಕ್ಕೆ ಒಪ್ಪಿರುವುದು ಒಳ್ಳೆಯ ಬೆಳವಣಿಗೆ ಎಂದು ಪುಟ್ಟಸ್ವಾಮಿ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಕಬ್ಬು ಬೆಳೆಗಾರರಾದ ಕರೀಗೌಡ, ಕಾಂತರಾಜು, ರೈತ ಮುಖಂಡರಾದ ಲಕ್ಷ್ಮಣಸ್ವಾಮಿ, ಬೈರೇಗೌಡ, ಅನಂತರಾಮ ಪ್ರಸಾದ್, ಜಯ ಕರ್ನಾಟಕ ಸಂಘಟನೆಯ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.