ADVERTISEMENT

ಜಿಲ್ಲೆಯಲ್ಲಿ ಒಟ್ಟು 112 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 13:07 IST
Last Updated 18 ಏಪ್ರಿಲ್ 2013, 13:07 IST

ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಬುಧವಾರ ಜಿಲ್ಲೆಯಲ್ಲಿ ಒಟ್ಟು 42 ಅಭ್ಯರ್ಥಿಗಳು 54 ನಾಮಪತ್ರ ಸಲ್ಲಿಸಿದರು. ಮಾಗಡಿ ಕ್ಷೇತ್ರದಿಂದ 15 ಅಭ್ಯರ್ಥಿಗಳು 19, ರಾಮನಗರ ಕ್ಷೇತ್ರದಿಂದ 13 ಅಭ್ಯರ್ಥಿಗಳು 15, ಕನಕಪುರದಿಂದ 5 ಅಭ್ಯರ್ಥಿಗಳು 6 ಹಾಗೂ ಚನ್ನಪಟ್ಟಣದಿಂದ 9 ಅಭ್ಯರ್ಥಿಗಳು 14 ನಾಮಪತ್ರಗಳನ್ನು ಸಲ್ಲಿಸಿದರು.

ಮಾಗಡಿ ಕ್ಷೇತ್ರದಿಂದ ವಿ. ರಾಜಶೇಖರ್ (ಪಕ್ಷೇತರ) ಎರಡು ನಾಮಪತ್ರಗಳು, ರವಿಕುಮಾರ್ ಎಂ.ಟಿ. (ಪಕ್ಷೇತರ) ಎರಡು ನಾಮಪತ್ರ, ಎಂ. ಸುಬ್ರಹ್ಮಣಿ (ಭಾರತೀಯ ಜನತಾ ದಳ), ಟಿ.ಎಂ. ಗಂಗಯ್ಯ (ಪಕ್ಷೇತರ), ಎ.ಜಿ. ಕೃಷ್ಣಮೂರ್ತಿ (ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ), ಎಚ್.ಸಿ. ಬಾಲಕೃಷ್ಣ (ಜೆಡಿಎಸ್), ಕೆ. ರಂಗಸ್ವಾಮಿ (ಪಕ್ಷೇತರ) ಎರಡು ನಾಮಪತ್ರ, ಟಿ. ಹೊಂಬೇಗೌಡ (ಪಕ್ಷೇತರ) ಎರಡು ನಾಮಪತ್ರ, ಕೆ.ಬಿ.ರಜಿತ್‌ಕುಮಾರ್ (ಬಿಎಸ್‌ಆರ್), ಬಾಲಕೃಷ್ಣ ಎಚ್.ಎಲ್. (ಪಕ್ಷೇತರ), ಬಾಲಕೃಷ್ಣ (ಪಕ್ಷೇತರ), ಮಹಮದ್ ಅಫ್ಸರ್ ಪಾಷಾ (ಪಕ್ಷೇತರ), ಎನ್. ಮಂಜುನಾಥ್ (ಪಕ್ಷೇತರ), ಡಾ. ರಾಜಶೇಖರ್ (ಪಕ್ಷೇತರ), ಮಹಮದ್ ಮುನೀರ್ ಅಹಮದ್ (ಪಕ್ಷೇತರ).

ರಾಮನಗರ ಕ್ಷೇತ್ರದಿಂದ ಶಿವಮಾದು (ಬಿಜೆಪಿ), ಎಚ್.ಎಸ್.ತೀರ್ಥಪ್ರಸಾದ್ (ಬಿಎಸ್‌ಆರ್), ಎಸ್.ಜಯರಾಮ್ (ಭಾರತೀಯ ಡಾ. ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ), ರವಿಕುಮಾರ್ (ಪಕ್ಷೇತರ), ಅಜಿೀಜ್ ಉಲ್ಲಾ ಷರೀಫ್ (ಪಕ್ಷೇತರ), ಶಿವಲಿಂಗಯ್ಯ (ಪಕ್ಷೇತರ), ಉಮೇಶ್ (ಪಕ್ಷೇತರ), ಮುನಾವರ್ ಷರೀಫ್ (ಪಕ್ಷೇತರ), ಆರ್.ಸಿ. ಕುಮಾರಸ್ವಾಮಿ (ಪಕ್ಷೇತರ), ಮರಿದೇವರು (ಪಕ್ಷೇತರ), ಜಿ.ಪಿ.ಶಂಕರೇಗೌಡ (ಪಕ್ಷೇತರ) ತಲಾ ಒಂದು ನಾಮಪತ್ರಗಳನ್ನು, ಪುಟ್ಟಸ್ವಾಮಾಚಾರಿ (ಪಕ್ಷೇತರ) ಹಾಗೂ ಚಲುವರಾಜು (ಪಕ್ಷೇತರ) ತಲಾ 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಿಂದ ಶಿವರುದ್ರಯ್ಯ (ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ), ಎಂ.ಸಿ.ವಿ. ಮೂರ್ತಿ (ಜೆಡಿಯು), ರವಿಕುಮಾರ್‌ಗೌಡ (ಬಿಜೆಪಿ), ಸುವರ್ಣ (ಪಕ್ಷೇತರ), ಅಶ್ರಫ್ (ಹಿಂದೂಸ್ತಾನ್ ಜನತಾ ಪಾರ್ಟಿ), ಬಿ.ನಾಗರಾಜು (ಕೆಜಿಪಿ) ಎರಡು ನಾಮಪತ್ರ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (ಸಮಾಜವಾದಿ ಪಕ್ಷದಿಂದ ಒಂದು, ಪಕ್ಷೇತರರಾಗಿ ಮೂರು), ಕೆ.ಎಚ್. ಕುಮಾರ್ (ಪಕ್ಷೇತರ), ಮುಜ್‌ಮಿಲ್ ಪಾಷಾ (ಪಕ್ಷೇತರ), ಬಿ.ಬಿ. ಜಾನ್ (ಪಕ್ಷೇತರ).

ಕನಕಪುರ ಕ್ಷೇತ್ರದಿಂದ ಶಿವರೇಣುಕಾ (ಪಕ್ಷೇತರ)-1 ಈ ಹಿಂದೆಯೂ ಇವರು ನಾಮಪತ್ರ ಸಲ್ಲಿಸಿದ್ದಾರೆ. ಎಚ್.ಎಂ.ಶಿವಕುಮಾರ್ (ಪಕ್ಷೇತರ), ಎಂ.ಗೋವಿಂದರಾಜು (ಬಿಎಸ್‌ಆರ್), ಕಾಳಯ್ಯ (ಭಾರತೀಯ ಡಾ. ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ) ತಲಾ ಒಂದು ನಾಮಪತ್ರ, ಎಂ.ಮಧು (ಕೆ.ಜೆ.ಪಿ)  2 ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟಾರೆ 76 ಅಭ್ಯರ್ಥಿಗಳು 112 ನಾಮಪತ್ರ ಸಲ್ಲಿಸಿದಂತಾಗಿದೆ. ಚನ್ನಪಟ್ಟಣದಲ್ಲಿ 20 ಅಭ್ಯರ್ಥಿಗಳು 30 ನಾಮಪತ್ರ, ರಾಮನಗರದಲ್ಲಿ 19 ಅಭ್ಯರ್ಥಿಗಳು 26 ನಾಮಪತ್ರ , ಕನಕಪುರದಲ್ಲಿ 16 ಅಭ್ಯರ್ಥಿಗಳು 25 ನಾಮಪತ್ರ ಹಾಗೂ ಮಾಗಡಿಯಲ್ಲಿ 21 ಅಭ್ಯರ್ಥಿಗಳು 31 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.