ADVERTISEMENT

ಪರಿಸರ ಸಂರಕ್ಷಣೆ ಎನ್‌ಎಸ್‌ಎಸ್‌ನ ಗುರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ದೇವನಹಳ್ಳಿ: `ಪರಿಸರ ಸಂರಕ್ಷಣೆ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವುದು ಹಾಗೂ ಜಲ ಸಂವರ್ಧನೆ ಬಗ್ಗೆ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ~ ಎಂದು ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಆರ್.ಶ್ರಿನಿವಾಸ್ ತಿಳಿಸಿದರು.

ತಾಲ್ಲೂಕಿನ ಬೆಟ್ಟಕೋಟೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜುವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

`ಎನ್.ಎಸ್.ಎಸ್ ಶಿಬಿರಾರ್ಥಿಗಳು ನಾಯಕತ್ವ ಗುಣದೊಂದಿಗೆ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಗ್ರಾಮೀಣ ಜೀವನ ಸಂಸ್ಕೃತಿ, ನಾಗರಿಕತೆಯ ವಾಸ್ತವ ಸ್ಥಿತಿಗತಿ ಬಗ್ಗೆ ಅರಿತುಕೊಳ್ಳಬೇಕು. ಈ ಮೂಲಕ ಶಿಬಿರದ ಉದ್ದೇಶಗಳು ಸಾರ್ಥಕತೆಯಾಗಬೇಕು~ ಎಂದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ರಾಜಣ್ಣ, `ಯುವ ಸಮುದಾಯ ದೇಶದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು. ಹಾಗಾಗಿ ಎನ್‌ಎಸ್‌ಎಸ್ ನಂಥ ಶಿಬಿರಗಳಲ್ಲಿ ಪಾಲ್ಗೊಂಡು ವಾಸ್ತವ ಸ್ಥಿತಿಯ ಬಗ್ಗೆ ತಿಳಿಯಬೇಕಿದೆ ಎಂದರು.
 
ಶಿಕ್ಷಣ ಸಂಸ್ಥೆ ಜಂಟಿಕಾರ್ಯದರ್ಶಿ ಎ.ಆರ್.ಶ್ರಿನಿವಾಸಯ್ಯ ಮಾತನಾಡಿ, `1968ರಲ್ಲಿ ಪ್ರಥಮ ಬಾರಿ ರಾಷ್ಟ್ರೀಯ ಸೇವಾ ಯೋಜನೆ ಜಾರಿಯಾಯಿತು. ರಚನ್ಮಾಕ ಕಾರ್ಯಕ್ರಮಗಳಾದ ಸ್ವದೇಶೀ ವಸ್ತು ಬಳಕೆ, ಗಾಂಧೀಜಿ ಹಾಗೂ ವಿವೇಕಾನಂದರ ಕನಸುಗಳನ್ನು ನನಸು ಮಾಡುವುದು ಸೇವಾ ಯೋಜನೆಯ ಮುಖ್ಯ ಉದ್ದೇಸಗಳಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಆರ್.ಪಂಡಿತಾರಾಧ್ಯ, `ದೇಶದ ಸಂಸ್ಕೃತಿ ಪರಂಪರೆ ವಿಶ್ವ ಮಾನ್ಯವಾದದ್ದು. ಪರಸ್ಪರ ಹೊಂದಾಣಿಕೆ ಬಾಂಧವ್ಯ, ಸಾಮರಸ್ಯ, ಮಾನವೀಯತೆ, ಗ್ರಾಮೀಣರಲ್ಲಿ ಕಾಣಲು ಸಾಧ್ಯ. ಅದೇ ರೀತಿ ಪರಿಸರ ಉತ್ತಮ ಸನ್ನಡತೆ ಕಾಣಬಹುದು ಎಂದರು.

ಶೇಷಾದ್ರಿಪುರಂ ಸಂಜೆ ಕಾಲೇಜು ಮುಖ್ಯಸ್ಥ ವೀರಭದ್ರಯ್ಯ, ಪ್ರಾಂಶುಪಾಲ ಮಹಾಲಕ್ಷ್ಮಿ ಮಾತನಾಡಿದರು.
ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಎನ್.ಕೃಷ್ಣಮೂರ್ತಿ, ಸ.ಹಿ.ಪ್ರಾಥಮಿಕ ಶಾಲೆ ಮುಖೋಪಾಧ್ಯಾಯ ಎಂ.ಮಹೇಶ್ವರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ರಾಮಲಿಂಗೇಶ್ವರ(ಸಿಸಿರಾ) ಇದ್ದರು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಟಿ.ಎಸ್.ಲೋಕೇಶ್ ಕುಮಾರ್ ಸ್ವಾಗತಿಸಿದರು, ಕ.ಸಾ.ಪ ಜಿಲ್ಲಾ ಖಜಾಂಚಿ ಯ.ಚಿ.ದೊಡ್ಡಯ್ಯ ನಿರೂಪಿಸಿದರು.

ಜನಪದ ಕಲಾವಿದ ವಾಸುದೇವ್ ಹೊಸಳ್ಳಿ, ಹಾಡೋನಳ್ಳಿ ನಾಗರಾಜ್, ಕಂಟನ ಕುಂಟೆ ಅಶ್ವಥ್ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.