ADVERTISEMENT

ಮಾಗಡಿಯ 83 ಕೆರೆಗಳಿಗೆ ಹೇಮಾವತಿ ನೀರು

ಸಿ.ಎಂ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 10:02 IST
Last Updated 4 ಮಾರ್ಚ್ 2014, 10:02 IST

ಮಾಗಡಿ: ತಾಲ್ಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿಗೆ  ಗುರುವಾರ (ಮಾ.6) ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಶಂಕುಸ್ಥಾಪನೆ ನೆರವೇರಿಸ­ಲಿದ್ದಾರೆ ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾ­ಲಯದಲ್ಲಿ ನಡೆದ  ಹೇಮಾವತಿ ನದಿ ನೀರು ಹರಿಸುವ ಯೋಜನೆಗೆ ಶಂಕುಸ್ಥಾಪನಾ ಸಭೆಯ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಕೆಂಪೇಗೌಡ ಕೋಟೆ ಬಯ­ಲಿನಲ್ಲಿ ನಡೆಯಲಿರುವ ಶಂಕುಸ್ಥಾಪನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ್‌, ಸಚಿವರಾದ ಟಿ.ಬಿ.ಜಯಚಂದ್ರ, ಕೃಷ್ಣಭೈರೇಗೌಡ, ನೀರಾವರಿ ಸಚಿವ ಎಂ.ಬಿ,ಪಾಟೀಲ್‌ ಇತರರು ಭಾಗವಹಿಸುವರು. ತಾಲ್ಲೂಕಿ­ನಾದ್ಯಂತ  ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಚ್‌.ಎಂ.ರೇವಣ್ಣ ತಿಳಿಸಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ,  ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಯೋಜನೆ ಇದು. ರೈತರ ಹಿತಕಾಯುವ ಶಾಶ್ವತ ಕುಡಿಯುವ ನೀರು ಯೋಜನೆ ಮುಂಜೂರು ಮಾಡಿಸುವಲ್ಲಿ ಶ್ರಮಿಸಿದ ಮಾಜಿ ಸಚಿವ ಎಚ್‌.ಎಂ.ರೇವಣಣ್ಣ ಅವರ ಸೇವೆ ಸ್ಮರಣೀಯ ಎಂದರು. 

ಎತ್ತಿನಹೊಳೆಯಿಂದ ತಿಪ್ಪಗೊಂಡನ ಹಳ್ಳಿ ಕೆರೆಗೆ 2 ಟಿಎಂಸಿ ನೀರು ಹರಿಸಲು ಕೇಂದ್ರ ಸರ್ಕಾರದ ಸಚಿವ ಡಾ.ಎಂ.­ ವೀರ­ಪ್ಪ­­ ಮೊಯಿಲಿ ಇಂದು ಚಿಕ್ಕಬಳ್ಳಾ­ಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿ­ದ್ದಾರೆ. ಜೊತೆಗೆ ಮಾಗಡಿ ಮತ್ತು ಕುಣಿಗಲ್‌ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಿ, ಜನತೆಗೆ ಕುಡಿಯಲು ನೀರು ಒದಗಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾ­ಮಯ್ಯ ಇದೇ 6ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ  ಹೇಮಾವತಿ ನದಿ ನೀರು ಮಾಗಡಿ ತಾಲ್ಲೂಕಿಗೆ ಹರಿಯುವುದಿಲ್ಲ ಎಂದು ನೀಡಿದ್ದ  ಹೇಳಿಕೆಗೆ ಉತ್ತರ ದೊರೆ­ಯಲಿದೆ.
ಪ್ರತಿಯೊಬ್ಬರು ಕಾರ್ಯಕ್ರಮ­ದಲ್ಲಿ ಭಾಗವಹಿಸುವಂತೆ ಸಂಸದ ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ಎ.ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಿಗಳೂರು ಗಂಗಾಧರ್‌ ಮುಖ್ಯಮಂತ್ರಿಗಳ ಮಾತ­ನಾಡಿದರು.

ಕಾಂಗ್ರೆಸ್‌ ಪಕ್ಷದ ಮುಖಂಡರಾದ ಕಮಲಮ್ಮ ಹನುಮಂತೇಗೌಡ, ಕಲ್ಪನಾ­ಶಿವಣ್ಣ, ಪುರಸಭೆಯ ಮಾಜಿ ಅಧ್ಯಕ್ಷರಾದ ಟಿ.ಭೋಗೇಶ್‌, ರಂಗ­ಹನುಮಯ್ಯ, ಪಿ.ವಿ.ಸೀತಾರಾಮು, ಪುರಸಭೆಯ ಸದಸ್ಯರಾದ ಎಂ.ಎನ್‌.ಮಂಜು­ನಾಥ್‌, ನರ­ಸಿಂಹ­ಮೂರ್ತಿ, ಹೊಸಪೇಟೆ ಮಂಜು­ನಾಥ್‌,  ಶಿವಕುಮಾರ್‌, ಮಹದೇವ್‌, ನಯಾಜ್‌, ಅಖಿಲಾ ಭಾನು,  ಜುಟ್ಟನ ಹಳ್ಳಿ ಜಯರಾಮು, ಮಾರೇಗೌಡ,  ಚಿತ್ತಯ್ಯ, ಬಾಲಿಚಿಕ್ಕಣ್ಣ, ಗಂಗಣ್ಣ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್‌.ಸು­ಹೇಲ್‌, ಜಾವಿದ್‌, ಬಿ.ಎಸ್‌.ಕುಮಾರ್‌, ಕೆ.ಎಚ್‌.ಕೃಷ್ಣಮೂರ್ತಿ, ಜಯಶಂಖರ್‌, ಗಿರಿಯಣ್ಣ, ಎಂ.ಸಿ.ರಾಜಣ್ಣ, ಸಿ.ಜಯ­ರಾಮು, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಾಂಕ್‌ ರೇವಣ್ಣ, ಬಿ.ವಿ.ಜಯರಾಮು,ಕಾರ್ತಿಕ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.