ADVERTISEMENT

ರೋಗಗಳ ತಡೆಗೆ ಮಿತ ಆಹಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಕನಕಪುರ: ಋತುಮಾನಕ್ಕೆ ಅನುಸಾರವಾಗಿ ಮಿತ ಆಹಾರ ಸೇವಿಸುವುದರಿಂದ ರೋಗಗಳು ಬರದಂತೆ ತಡೆಯಲು ಸಾಧ್ಯವೆಂದು ಡಾ.ರಾಘವೇಂದ್ರ ಬಾಬು ತಿಳಿಸಿದರು.

ಆರ್ಯನ್ ಇಂಡಸ್ಟ್ರೀಸ್ ಆವರಣದಲ್ಲಿ ಆಯೋಜಿಸಿದ್ದ ಆರ್ಯವೇದ ಶಿಬಿರದಲ್ಲಿ ಜೀವನ ಪರಿಚಯದ ಬಗ್ಗೆ ಅವರು ತಿಳಿಸಿಕೊಟ್ಟರು. 

 ನಿತ್ಯವೂ ಸಮಯಕ್ಕೆ ತಕ್ಕಂತೆ ಊಟ, ತಿಂಡಿ ಮಾಡುವುದು, ಮೂರು ಒತ್ತು ಅನ್ನ ಸೇವಿಸದೆ ರಾಗಿ, ಗೋಧಿ, ಅಗಸೆ, ಓಟ್ಸ್‌ನಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಂಡಲ್ಲಿ ಆರೋಗ್ಯ ವೃದ್ಧಿಸುವುದು, ಬೆಳಗಿನ ಉಪಹಾರದ ಜೊತೆಗೆ ಬೇಯಿಸಿದ ಹೆಸರು ಕಾಳು, ಹಣ್ಣುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ದೂರಮಾಡಬಹುದು ಎಂದರು. 

 ಪ್ರತಿದಿನ ಬೆಳಿಗ್ಗೆ ಉದಯಿಸಿದ ಸೂರ್ಯನಡಿ 20 ನಿಮಿಷ ದೇಹವನ್ನು ಕಿರಣಗಳಿಗೆ ಒಡ್ಡಿದರೆ ಅಗತ್ಯ ಕ್ಯಾಲ್ಸಿಯಂ ಸಿಗುವುದು ಎಂದರು. 

 ಆರ್ಯವೇದದ ಬಗ್ಗೆ ರಾಜೇಶ್ ಮಾತನಾಡಿ, ಅಗಸೆ ಬಳಸುವುದರಿಂದ ಬಡ್ಲ್ ಷುಗರ್, ಬಿ.ಪಿ. ಕೊಲೆಸ್ಟ್ರಾಲ್ ತಡೆಗಟ್ಟಬಹುದು. ಗಿಡಮೂಲಿಕೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.  ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಆರ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.