ADVERTISEMENT

‘ಕುಡಿಯುವ ನೀರು ಒದಗಿಸಲು ಮನವಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 11:04 IST
Last Updated 18 ಸೆಪ್ಟೆಂಬರ್ 2013, 11:04 IST

ಮಾಗಡಿ: ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುವಂತಹ ಪರಿಸ್ಥಿತಿ ಇದೆ. ಪುರಸಭೆ ವತಿಯಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವಂತೆ ತಾ.ಪಂ ಅಧ್ಯಕ್ಷ ಜಿ.ಕೃಷ್ಣ ಮನವಿ ಮಾಡಿದರು.

ತಾ.ಪಂ ಆವರಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ರೈತರು ನರೇಗಾ ಯೋಜ ನೆಯಡಿ ಸವಲತ್ತುಗಳನ್ನು ಪಡೆದು ಏಲಕ್ಕಿ, ಬಾಳೆ ಬೆಳೆಯಲು ಮುಂದಾ ಗಬೇಕು. ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಯಲ್ಲಿ ಸಸಿ ನೆಡಬೇಕು. ತಾಲ್ಲೂಕಿನಲ್ಲಿ ಇರುವ ಎಲ್ಲಾ ಶಾಲೆಗಳ ಆವರಣದಲ್ಲಿ ನುಗ್ಗೆ, ಪಪ್ಪಾಯಿ, ಕರಿಬೇವು, ನೆಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಶಿಕ್ಷಕರು ಮುಂದಾ ಗಬೇಕು ಎಂದು ತಾ.ಪಂ ಅಧ್ಯಕ್ಷರು ತಿಳಿಸಿದರು.

ತೋಟಗಾರಿಕಾ ಇಲಾಖೆ ವತಿಯಿಂದ ಹಿಂದಿನ ಸಾಲಿನಲ್ಲಿ ಆಗಿರುವ ಖರ್ಚು, ವೆಚ್ಚದ ಬಗ್ಗೆ ವರದಿ ನೀಡಬೇಕು ಎಂದು ಸದಸ್ಯರೆಲ್ಲರೂ ಆಗ್ರಹಿಸಿದರು. ತಾ.ಪಂ ಇ.ಒ.ಕೆ.ಬಿ.ಅಕ್ಕೋಜಿ ಮಾತನಾಡಿ, ಗ್ರಾಮಸಭೆಗಳಲ್ಲಿ ಆಯಾ ಇಲಾಖೆಯ ಫಲಾನುಭವಿಗಳ ಪಟ್ಟಿಯನ್ನು ತಾಲ್ಲೂಕು ಪಂಚಾಯ್ತಿ ಕಚೇರಿಗೆ ತಕ್ಷಣ ನೀಡಬೇಕು ಎಂದರು.

ತಾ.ಪಂ ಸಾಮಾನ್ಯ ಸಭೆ ಮತ್ತು ಗ್ರಾಮಸಭೆಯ ದಿನಾಂಕಗಳನ್ನು ತಾ.ಪಂ ಸದಸ್ಯರಿಗೆ ಕಡ್ಡಾಯವಾಗಿ ತಿಳಿಸಬೇಕು ಎಂದು ತಾ.ಪಂ ಸದಸ್ಯ ಜಿ.ವಿ.ರಾಮಣ್ಣ ಆಗ್ರಹಿಸಿದರು. ತಾ.ಪಂ ಸದಸ್ಯ ಎಂ. ರಾಮಣ್ಣ ಮಾತನಾಡಿ, ಫಲಾನು ಭವಿಗಳು ಸವಲತ್ತುಗಳನ್ನು ಪಡೆ ಯಲು ಜಿ.ಪಂ ಅಥವಾ ತಾ.ಪಂ ಸದಸ್ಯರ ಶಿಫಾರಸು ಪತ್ರಗಳನ್ನು ಕಡ್ಡಾಯವಾಗಿ ಪಡೆಯುವಂತೆ ಆದೇಶ ನೀಡಿದರು.

ತಾ.ಪಂ ಸದಸ್ಯ ಬಿ.ಟಿ.ವೆಂಕಟೇಶ್ ಮಾತನಾಡಿ, ನರೇಗಾ ಯೋಜನೆಯಡಿ ಜಲಾನಯನ ಇಲಾಖೆಯಲ್ಲಿ ರೂ.5ಲಕ್ಷ ಹಣ ದುರುಪಯೋಗವಾಗಿದೆ. ನರೇಗಾ ಮಾರ್ಗಸೂಚಿ ಪ್ರಕಾರ ಕಾರ್ಯ ನಿರ್ವಹಿಸಿಲ್ಲ. ಜಲಾನಯನ ಅಧಿಕಾರಿ ಯನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದರು.

ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಆಂಗ್ಲಭಾಷೆ ಮತ್ತು ಗಣಿತ ಬೋಧಕ ಶಿಕ್ಷಕರಿಲ್ಲದೆ ವಿದ್ಯಾ ರ್ಥಿಗಳ ಗುಣಮಟ್ಟ ಕುಸಿ ಯುತ್ತದೆ. ತಕ್ಷಣ ಶಿಕ್ಷಕರನ್ನು ನೇಮಿಸುವಂತೆ ತಾ.ಪಂ ಸದಸ್ಯೆ ಭಾರತಿಮಹದೇವ್ ಆಗ್ರಹ ಪಡಿಸಿದರು.

ತಾ.ಪಂ ಸಾಮಾನ್ಯ ಸಭೆಗೆ ಗೈರು ಹಾಜರಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆಯುವಂತೆ ಸರ್ವಾನು ಮತ ದಿಂದ ತೀರ್ಮಾನಿಸಲಾಯಿತು.

ಸದಸ್ಯ ಶಂಕರಪ್ಪ ಮಾತನಾಡಿ, ಲಕ್ಕೇನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ಕಳವಾಗಿರುವ ಬಗ್ಗೆ ದೂರು ನೀಡಿದ್ದರೂ  ಬೆಸ್ಕಾಂ ಎ.ಇ.ಇ ಕ್ರಮ ಕೈಗೊಂಡಿಲ್ಲ. ತಾ.ಪಂ ಸದಸ್ಯರ ಮನವಿಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಆಗ್ರಹಿಸಿದರು. ಪಾಲ ನಹಳ್ಳಿ ಶಾಲೆಯ ಹಿಂಭಾಗ ವಿದ್ಯುತ್ ತಂತಿ ತೆಂಗಿನ ಮರಕ್ಕೆ ತಗಲುತ್ತಿದ್ದು ಬದಲಾ ಯಿಸುವಂತೆ  ಸದಸ್ಯೆ ಜಿ.ಶಿವಮ್ಮ ಆಗ್ರಹಿಸಿದರು.

ನಿರ್ಮಿತಿ ಕೇಂದ್ರದವರು ಕಟ್ಟುವ ಕಟ್ಟಡಗಳು ತೀರಾ ಕಳಪೆಯಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾಮ ಗಾರಿಗಳನ್ನು ನೀಡದಂತೆ ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆದು ಮನವಿ ಮಾಡು ವುದಾಗಿ ತಿಳಿಸಿದರು. ಬಿ.ಸಿ.ಎಂ ಇಲಾಖೆ ವತಿಯಿಂದ ಅಲೆಮಾರಿ ಜನಾಂಗ ದವರಿಗೆ ಅಂಗಡಿ ನಡೆಸಲು ಸಾಲ, ಸಹಾಯಧನದ ವ್ಯವಸ್ಥೆ ಬಗ್ಗೆ ತಕ್ಷಣ ಪಟ್ಟಿ ನೀಡುವಂತೆ ಕಾರ್ಯ ನಿರ್ವಾಹಕ ಅಧಿಕಾರಿ ಅಕ್ಕೋಜಿ ಬಿ.ಸಿ.ಎಂ ವಿಸ್ತರಣಾಧಿಕಾರಿಗೆ ಸೂಚಿಸಿದರು.

ಸದಸ್ಯ ಆರ್.ನಾಗರಾಜ್ ಮಾತ ನಾಡಿ, ಅಕ್ಷರ ದಾಸೋಹಕ್ಕೆ ನೀಡುವ ಆಹಾರ ಪಡಿತರವನ್ನು ಮಾರ್ಚ್, ಏಪ್ರಿಲ್, ಮೇನಲ್ಲಿ ಸರಿ ಯಾಗಿ ವಿತ ರಿಸಿಲ್ಲ. ಆಹಾರ ಧಾನ್ಯವನ್ನು ದುರು ಪಯೋಗ ಪಡಿಸಿಕೊಂಡಿರುವುದರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿ ಸಿದರು. ತೇಜಸ್ವಿನಿ ಮುದ್ದಹನುಮೇ ಗೌಡ, ಅನುಸೂಯ ಕಾಂತರಾಜು, ತಾ.ಪಂ ಉಪಾಧ್ಯಕ್ಷೆ ಅನಿಸಾಖಾನಂ ಇತರರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ದಾಖಲೆ ನೀಡುವಂತೆ ಆಗ್ರಹಿಸಿದರು.

ನಿರ್ಣಯ: ತಾ.ಪಂ ಸಾಮಾನ್ಯ ಸಭೆಗೆ ಆಗಮಿಸುವ ತಾಲ್ಲೂಕು ಮಟ್ಟದ ಅಧಿಕಾರಿಗಳು ಅನುಪಾಲನಾ ವರದಿ ತರದೆ ಬಂದಿರುವುದರ ವಿರುದ್ಧ ತಾ.ಪಂ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಖಂಡಿಸಿ ದರು. ಆರೋಗ್ಯ ಇಲಾಖೆಯಲ್ಲಿ ಬೇರೆ ಕಡೆಗೆ ನಿಯೋಜನೆಗೊಂಡಿರುವ ವೈದ್ಯರು, ದಾದಿಯರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ತಾ.ಪಂ ಸದಸ್ಯರೆಲ್ಲರೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.