ADVERTISEMENT

ಕಲ್ಯಾಣಿಯಿಂದ ಶವ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 13:27 IST
Last Updated 8 ಏಪ್ರಿಲ್ 2019, 13:27 IST
ಕಿರಣ್‌ ಕುಮಾರ್‌ ಅವರ ಶವವನ್ನು ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ತಂಡದವರು ಹೊರತೆಗೆದರು
ಕಿರಣ್‌ ಕುಮಾರ್‌ ಅವರ ಶವವನ್ನು ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ತಂಡದವರು ಹೊರತೆಗೆದರು   

ಮಾಗಡಿ: ಪಟ್ಟಣದ ತಿರುಮಲೆ ರಸ್ತೆಯ ಬದಿಯ ಕಲ್ಯಾಣಿಗೆ ಭಾನುವಾರ ಸಂಜೆ ಜಾರಿಬಿದ್ದು ಮೃತಪಟ್ಟಿದ್ದ ಕಿರಣ್‌ ಕುಮಾರ್‌ (30) ಶವವನ್ನು ಅಗ್ನಶಾಮಕ ದಳದ ಸಿಬ್ಬಂದಿ ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಹರಸಾಹಸ ಪಟ್ಟು ಹೊರತೆಗೆದರು.

ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ನೇತೃತ್ವದಲ್ಲಿ ಸೋಮವಾರ ಮುಂಜಾನೆಯಿಂದಲೇ, 5 ಟ್ರ್ಯಾಕ್ಟರ್‌ಗಳಿಗೆ ಜನರೇಟರ್‌ ಬಳಸಿ ಕಲ್ಯಾಣಿಯ ನೀರು ಹೊರಗೆ ಹರಿಸಲಾಯಿತು. ಒಂದು ಗಂಟೆಯ ವೇಳೆಗೆ ಶವ ಪತ್ತೆ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರ್‌, ಮಾದೇಗೌಡ, ಚವ್ಹಾಣ್‌, ರಮೇಶ್‌ ತಂಡದವರೊಂದಿಗೆ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಹಕರಿಸಿದರು.

ತಹಶೀಲ್ದಾರ್‌ ನರಸಿಂಹಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆಯ ಮುಖ್ಯಾಧಿಕಾರಿ ಅಥವಾ ಜನಪ್ರತಿನಿಧಿಗಳು ಕಲ್ಯಾಣಿಯತ್ತ ಸುಳಿಯಲಿಲ್ಲ. ಸಾವಿರಾರು ಯುವಕರು ಕಲ್ಯಾಣಿಯ ಸುತ್ತ ನೆರೆದಿದ್ದರು.

ADVERTISEMENT

ದುಃಖ: ಗಂಡನನ್ನು ಕಳೆದುಕೊಂಡಿರುವ ರೂಪ, ತನ್ನೆರಡು ಎಳೆಯ ಮಕ್ಕಳನ್ನು ಎದೆಗೆ ಅವುಚಿಕೊಂಡು ರೋದಿಸುತ್ತಿದ್ದುದು ಮನ ಕಲಕುವಂತಿತ್ತು. ಸ್ವಗ್ರಾಮ ಹಾರೋಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.