ADVERTISEMENT

ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 14:31 IST
Last Updated 24 ಜನವರಿ 2019, 14:31 IST
ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ ಉಚಿತ ಅಡುಗೆ ಅನಿಲ ವಿತರಿಸಿದರು. ಸದಸ್ಯ ರಘು ಇದ್ದರು
ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ ಉಚಿತ ಅಡುಗೆ ಅನಿಲ ವಿತರಿಸಿದರು. ಸದಸ್ಯ ರಘು ಇದ್ದರು   

ಮಾಗಡಿ: ಸರ್ಕಾರಿ ಸವಲತ್ತು ಅರ್ಹ ಬಡವರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ ತಿಳಿಸಿದರು.

ಹೊಸಪೇಟೆ ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಗುರುವಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ದಾರರಿಗೆ ಅಡುಗೆ ಅನಿಲ ವಿತರಿಸಿ ಮಾತನಾಡಿದರು.

ಪಟ್ಟಣದ 23 ವಾರ್ಡ್‌ಗಳಲ್ಲಿ ನೆಲೆಸಿರುವ ಕಡು ಬಡವರಿಗೆ ಕನಿಷ್ಠ ಸರ್ಕಾರಿ ಸವಲತ್ತು ಸಿಗಬೇಕಿದೆ. 26 ಫಲಾನುಭವಿಗಳಿಗೆ ತಲಾ ₹5500 ವೆಚ್ಚದಲ್ಲಿ ಸಿಲಿಂಡರ್‌, ಸ್ಟೌ, ರೆಗ್ಯುಲೇಟರ್‌, ಪೈಪ್‌ ವಿತರಿಸಲಾಗಿದೆ. ಉಳಿದ 30 ಜನರಿಗೆ ಒಂದು ವಾರದಲ್ಲಿ ವಿತರಿಸಲಾಗುವುದು ಎಂದರು.

ADVERTISEMENT

ಪುರಸಭೆ ಸದಸ್ಯ ರಘು ಮಾತನಾಡಿ, ಬಡವರ ಸೇವೆಯಲ್ಲಿ ತೃಪ್ತಿ ಇದೆ ಎಂದು ಹೇಳಿದರು.

ಮುಖಂಡರಾದ ಕೆಂಪಣ್ಣ, ಸಿದ್ದೇಗೌಡ, ಪೇಪರ್‌ ಕುಮಾರ, ಡಾಬಾ ರಮೇಶ್‌, ಶಿವಕುಮಾರ್‌, ಮಹೇಶ್‌, ಕೃಷ್ಣಪ್ಪ, ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.