ADVERTISEMENT

‘ಹಿಂದುಳಿದ ವರ್ಗಗಳಿಗೆ ಬೆಳಕು ತಂದ ಮಹನೀಯ’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:18 IST
Last Updated 20 ಆಗಸ್ಟ್ 2019, 13:18 IST
ಮಾಗಡಿಯಲ್ಲಿ ಮಂಗಳವಾರ ನಡೆದ ಡಿ.ದೇವರಾಜ ಅರಸು ಜನ್ಮದಿನದ ಅಂಗವಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಚ್‌.ಶಿವರಾಜ್‌, ಪಿ.ವಿ.ಸೀತಾರಾಮು ಅವರು ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಮಾಗಡಿಯಲ್ಲಿ ಮಂಗಳವಾರ ನಡೆದ ಡಿ.ದೇವರಾಜ ಅರಸು ಜನ್ಮದಿನದ ಅಂಗವಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಚ್‌.ಶಿವರಾಜ್‌, ಪಿ.ವಿ.ಸೀತಾರಾಮು ಅವರು ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಮಾಗಡಿ: ಬಡವರ ಬಾಳಿನಲ್ಲಿ ಬೆಳಕು ತಂದ ಆದರ್ಶ ನಾಯಕ ಡಿ.ದೇವರಾಜ ಅರಸು ಎಂದು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ವಿಚಾರ ವೇದಿಕೆ ಅಧ್ಯಕ್ಷ ಪಿ.ವಿ.ಸೀತಾರಾಮು ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಡಿ.ದೇವರಾಜ ಅರಸು ಅವರ 104ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಉಳುವವನೇ ಭೂ ಒಡೆಯ ಯೋಜನೆ ಜಾರಿಗೆ ತಂದರು. ಮಲಹೊರುವ ಪದ್ಧತಿ ನಿರ್ಮೂಲನೆ ಮಾಡಿದರು. ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮಹಾನುಭಾವ. ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತಂದ ಆದರ್ಶ ವ್ಯಕ್ತಿ ಎಂದು ಬಣ್ಣಿಸಿದರು.

ADVERTISEMENT

ಕಾಂಗ್ರೆಸ್‌ ಮುಖಂಡ ಸಿ.ಜಯರಾಮು ಮಾತನಾಡಿ, ದೇವರಾಜ ಅರಸು ದಿಕ್ಕಿಲ್ಲದವರಿಗೆ ದಿಕ್ಕು ತೋರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದರು.‌ ಎಲ್ಲರ ಕಷ್ಟ ಆಲಿಸುವ ಗುಣ ಅವರಲ್ಲಿತ್ತು. ಅವರೊಬ್ಬ ಸಹೃದಯಿ ನಾಯಕರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಚ್‌.ಶಿವರಾಜ್‌, ಪುರಸಭೆ ಸದಸ್ಯ ಎಂ.ಎನ್‌.ಮಂಜುನಾಥ್‌, ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಮುನಿಕೃಷ್ಣ, ಇಒ ಪ್ರದೀಪ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿದ್ದೇಶ್ವರ, ತಾಲ್ಲೂಕು ಬಿಸಿಎಂ ಅಧಿಕಾರಿ ಜಿ.ವಿ ನಾಗರಾಜು, ಗ್ರೇಡ್‌–2 ತಹಶೀಲ್ದಾರ್‌ ಕೆಂಪೇಗೌಡ, ತಿಗಳ ಸಮಾಜದ ಮುಖಂಡ ಎಚ್‌.ಎಸ್‌.ಕೆಂಪಣ್ಣ, ತಾಲ್ಲೂಕು ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್‌, ಅರಸು ಬದುಕಿನ ಏಳು ಬೀಳು, ಆಡಳಿತ, ದುರಂತ ಸಾವಿನ ಬಗ್ಗೆ ಮಾತನಾಡಿದರು.

ತಾಲ್ಲೂಕು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬೆಳಗವಾಡಿ ರಂಗಸ್ವಾಮಿ, ಹಿರಿಯ ಪುರುಷ ಆರೋಗ್ಯ ಸಹಾಯಕ ತುಕಾರಾಮ್‌, ಆಹಾರ ನಿರೀಕ್ಷಕ ಶ್ರೀಧರ್‌, ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಪ್ಪ, ಖಜಾನೆ ಅಧಿಕಾರಿ ಲಕ್ಷ್ಮೀನಾರಾಯಣ, ಬಿಸಿಎಂ ಇಲಾಖೆ ನೌಕರರಾದ ಪರಮೇಶ್ವರ್‌, ರಾಕೇಶ್‌, ನಾಗರಾಜಯ್ಯ, ನಾಗೇಶ್‌ ಅಡಿವೆಪ್ಪ ಬಡಕುರಿ, ಪೂರ್ಣಿಮಾ, ಮಮತ, ಸ್ವಾತಿ, ಇಂದಿರಾ, ಐಶ್ವರ್ಯ ಹಾಗೂ ಸಿಬ್ಬಂದಿ ಇದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.