ADVERTISEMENT

ಎಚ್‌.ಎಂ.ರೇವಣ್ಣ ಅವರ 70ನೇ ಹುಟ್ಟುಹಬ್ಬ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 13:56 IST
Last Updated 8 ನವೆಂಬರ್ 2019, 13:56 IST
ಮಾಗಡಿ ಎಂಎಲ್‌ಸಿ, ಎಚ್‌,ಎಂ,ರೇವಣ್ಣ ಅವರ ಜನ್ಮದಿನದ ಅಂಗವಾಗಿ ಸಂಸದ ಡಿ.ಕೆ.ಸುರೇಶ್‌ , ಶಾಸಕ ಎ.ಮಂಜುನಾಥ ಅವರು ಸನ್ಮಾನಿಸಿದರು.
ಮಾಗಡಿ ಎಂಎಲ್‌ಸಿ, ಎಚ್‌,ಎಂ,ರೇವಣ್ಣ ಅವರ ಜನ್ಮದಿನದ ಅಂಗವಾಗಿ ಸಂಸದ ಡಿ.ಕೆ.ಸುರೇಶ್‌ , ಶಾಸಕ ಎ.ಮಂಜುನಾಥ ಅವರು ಸನ್ಮಾನಿಸಿದರು.   

ಮಾಗಡಿ: ‘ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ ಸಚಿವ ಹುದ್ದೆಗಳನ್ನು ನಿರ್ವಹಿಸಿರುವ ಎಚ್‌.ಎಂ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಜನಸೇವೆಯಲ್ಲಿ ತೊಡಿಗಿಸಿಕೊಂಡಿದ್ದೇವೆ’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರ 70ನೇ ಜನ್ಮದಿನದ ಅಂಗವಾಗಿ ಶುಭಕೋರಿ ಅವರು ಮಾತನಾಡಿದರು.

ಅಂದಿನ ಮುಖ್ಯಮಂತ್ರಿಗಳಾಗಿದ್ದ ಆರ್‌.ಗುಂಡೂರಾವ್‌ ಅವರನ್ನು ಮಾಗಡಿಗೆ ಕರೆಸಿಕೊಂಡು ಪುರಸಭೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದರು. ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟುವಾಗಿದ್ದುಕೊಂಡು, ಕೆಂಪೇಗೌಡರ ಹೆಸರಿನಲ್ಲಿ ಮೊದಲಭಾರಿಗೆ ಕಬಡ್ಡಿ ಸಂಘ ರಚಿಸಿದ್ದ ಎಚ್‌.ಎಂ.ರೇವಣ್ಣ ಕ್ರೀಡಾಪಟುವಾಗಿ ಯುವಕರನ್ನು ಕ್ರೀಡಾರಂಗದಲ್ಲಿ ಮುಂದುವರಿಸುವಂತೆ ಬೆಂಬಲ ನೀಡಿದರು. ಅವರ ಸೇವೆ ನಾಡಿಗೆ ಸಲ್ಲಲಿ, ದೇವರು ಆರೋಗ್ಯ ಭಾಗ್ಯ ನೀಡಲಿ ಎಂದರು.

ADVERTISEMENT

ಶಾಸಕ ಎ.ಮಂಜುನಾಥ ಮಾತನಾಡಿ, ‘ರಾಜಕೀಯದಲ್ಲಿ ನನಗೆ ಎಚ್‌.ಎಂ.ರೇವಣ್ಣ ಗುರು ಮತ್ತು ಮಾರ್ಗದರ್ಶಕರು. ಅವರ ಜನಸೇವೆ ನನಗೆ ಮೆಚ್ಚುಗೆಯಾಯಿತು. ಅವರನ್ನು ಇಂದಿಗೂ ನಾಡಿನ ಜನ ಗುರುತಿಸುತ್ತಿದ್ದಾರೆ’ ಎಂದರು.
ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿ, ‘ಸಿದ್ದಗಂಗಾ ಕ್ಷೇತ್ರದ ಡಾ.ಶಿವಕುಮಾರಸ್ವಾಮೀಜಿ ಮತ್ತು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೃಪಾಶೀರ್ವಾದ ಮತ್ತು ಮಾಗಡಿ ಕ್ಷೇತ್ರದ ಜನತೆಯ ಪ್ರೋತ್ಸಾಹದಿಂದ ನಾನು ರಾಜಕೀಯ ರಂಗದಲ್ಲಿ ಬೆಳೆದಿದ್ದೇನೆ. ದೇವರ ದಯೆಯಿಂದ ನನ್ನ ಕೈಲಾದಮಟ್ಟಿಗೆ ಸೇವೆ ಸಲ್ಲಿಸಿದ್ದೇನೆ’ ಎಂದರು.
ಕಾಂಗ್ರೆಸ್‌ ಮುಖಂಡರಾದ ಬಿ.ಎಸ್‌.ಪುಟ್ಟರಾಜು, ಅಗಲಕೋಟೆ ನರಸಿಂಹಮೂರ್ತಿ, ಎಚ್‌.ಎನ್‌.ಅಶೋಕ್‌, ಕುದೂರು ಚಂದ್ರಶೇಖರ್‌ ರೇವಣ್ಣ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.