ADVERTISEMENT

‘ಜನಪದ ಮನಸ್ಸು ಒಗ್ಗೂಡಿಸುವ ಕಲೆ’

ಪ್ರವಾಸಿ ಜಾನಪದ ಲೋಕೋತ್ಸವಕ್ಕೆ ತೆರೆ: ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 16:11 IST
Last Updated 18 ಫೆಬ್ರುವರಿ 2020, 16:11 IST
ಕಾರ್ಯಕ್ರಮದಲ್ಲಿ ಕಲಾವಿದರಾದ (ಎಡದಿಂದ) ಮಾಯಣ್ಣ, ಜಯಮ್ಮ, ಭಾಗ್ಯಮ್ಮ, ಸಿದ್ದಲಿಂಗಪ್ಪ, ಚೌಡಿಕೆ ರಾಮಣ್ಣ, ಗೋವಿಂದಯ್ಯ ಅವರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರೊಂದಿಗೆ ಜಯಪ್ರಕಾಶ ಗೌಡ, ಹಿ.ಶಿ. ರಾಮಚಂದ್ರಗೌಡ, ಟಿ. ತಿಮ್ಮೇಗೌಡ, ನಿರ್ಮಲಾನಂದನಾಥ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ಅನಿತಾ ಕುಮಾರಸ್ವಾಮಿ, ಆದಿತ್ಯ ನಂಜರಾಜ್‌ ಇದ್ದಾರೆ
ಕಾರ್ಯಕ್ರಮದಲ್ಲಿ ಕಲಾವಿದರಾದ (ಎಡದಿಂದ) ಮಾಯಣ್ಣ, ಜಯಮ್ಮ, ಭಾಗ್ಯಮ್ಮ, ಸಿದ್ದಲಿಂಗಪ್ಪ, ಚೌಡಿಕೆ ರಾಮಣ್ಣ, ಗೋವಿಂದಯ್ಯ ಅವರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರೊಂದಿಗೆ ಜಯಪ್ರಕಾಶ ಗೌಡ, ಹಿ.ಶಿ. ರಾಮಚಂದ್ರಗೌಡ, ಟಿ. ತಿಮ್ಮೇಗೌಡ, ನಿರ್ಮಲಾನಂದನಾಥ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ಅನಿತಾ ಕುಮಾರಸ್ವಾಮಿ, ಆದಿತ್ಯ ನಂಜರಾಜ್‌ ಇದ್ದಾರೆ   

ರಾಮನಗರ: ‘ಮನಸ್ಸು ಒಗ್ಗೂಡಿಸುವ ಕಲೆ ಎಂದರೆ ಅದು ಜನಪದ ಮಾತ್ರ. ಅದನ್ನು ಸಂರಕ್ಷಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಜಾನಪದ ಲೋಕದಲ್ಲಿ ಮಂಗಳವಾರ ಸಂಜೆ ಪ್ರವಾಸಿ ಜಾನಪದ ಲೋಕೋತ್ಸವದ ಸಮಾರೋಪ ಅಂಗವಾಗಿ ನಾಡಿನ 32 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ‘ಅಣುವನ್ನು ವಿಭಜಿಸುವ ಸೂತ್ರ ಕಂಡುಹಿಡಿದ ಮನುಷ್ಯ ಮನಸ್ಸುಗಳನ್ನು ಕೂಡಿಸುವುದನ್ನು ಕಲಿಯಲಿಲ್ಲ. ಆದರೆ ಕೂಡಿಸುವುದರಲ್ಲಿ ಇರುವ ಶಕ್ತಿ ಒಡೆಯುವುದರಲ್ಲಿ ಇಲ್ಲ’ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ. ತಿಮ್ಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಹಿರಿಯರಾದ ಹಿ.ಶಿ. ರಾಮಚಂದ್ರಗೌಡ. ಜಯಪ್ರಕಾಶ ಗೌಡ, ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌ ವೇದಿಕೆಯಲ್ಲಿ ಇದ್ದರು.

ADVERTISEMENT

ಜನಪದ ಕ್ಷೇತ್ರದ ಹಿರಿಯ ಸಾಧಕರು ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಅವರ ವಿವರ ಇಂತಿದೆ.
ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕ ಪ್ರಶಸ್ತಿ-– ಹನುಮಂತರಾಯಪ್ಪ ಭಾಗವತ, ತುಮಕೂರು ಜಿಲ್ಲೆ. ನಾಡೋಜ ಡಾ.ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ-– ಡಾ.ರಾ.ಗೌ. (ರಾಮೇಗೌಡ) ಮೈಸೂರು ಜಿಲ್ಲೆ. ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ-– ಭಾಗ್ಯಮ್ಮ, ಚಿಕ್ಕಮಗಳೂರು ಜಿಲ್ಲೆ. ಸೋಬಾನೆ ಚಿಕ್ಕಮ್ಮ ಪ್ರಶಸ್ತಿ-– ಜಯಮ್ಮ, ತುಮಕೂರು ಜಿಲ್ಲೆ. ದೊಡ್ಡಮನೆ ಪ್ರಶಸ್ತಿ-– ಚೌಡಿಕೆ ಮಾರಣ್ಣ, ಹಾಸನ ಜಿಲ್ಲೆ. ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ-– ಸಿದ್ದಲಿಂಗಪ್ಪ ಸಣ್ಣಕಲ್, ರಾಯಚೂರು ಜಿಲ್ಲೆ.

ದೊಡ್ಡಾಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ–-ಮಾಯಣ್ಣ, ಕರಡಿದೊಡ್ಡಿ. ಗೋವಿಂದಯ್ಯ, ಬೊಮ್ಮಚನಹಳ್ಳಿ. ಬಸವರಾಜು, ಹೇರಾಂಧ್ಯಪಹಳ್ಳಿ. ಪುಟ್ಟರಾಜಮ್ಮ, ದ್ಯಾವಪಟ್ಟಣ (ಎಲ್ಲರೂ ರಾಮನಗರ ಜಿಲ್ಲೆಯವರು). ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ-–ಅಕ್ಷತಾ ಕೃಷ್ಣಮೂರ್ತಿ, ಉತ್ತರ ಕನ್ನಡ ಜಿಲ್ಲೆ. ನಾಡೋಜ ಎಚ್.ಎಲ್. ನಾಗೇಗೌಡ ಪ್ರಶಸ್ತಿ–-ಆರ್.ಎಸ್. ತಮ್ಮಯ್ಯ, ಹಾಸನ ಜಿಲ್ಲೆ.

ಜಾನಪದ ಲೋಕ ಪ್ರಶಸ್ತಿ: ಶಿವನಗೌಡ ಪಾಟೀಲ, ರಾಯಭಾಗ. ಶಿವಮ್ಮ ಕೊಪ್ಪಳ. ಎಲ್. ಶಂಕರ್, ಮಂಡ್ಯ. ಅಬ್ದುಲ್ ಲತೀಫ್ ಪೇರೂರು, ಕಾಸರಗೂಡು ಜಿಲ್ಲೆ. ಎ.ಎಂ. ಹಾಲಯ್ಯ, ಹೂವಿನ ಹಡಗಲಿ. ಉಸ್ಮಾನ್, ಬೆಂಗಳೂರು. ಸಿ.ಎಸ್. ಆರಾಧ್ಯ, ಮಂಡ್ಯ. ಮೇಟಿಕೊಟ್ರಪ್ಪ, ಬಳ್ಳಾರಿ ಜಿಲ್ಲೆ. ಶಿವಮಲ್ಲೇಗೌಡ, ಚಾಮರಾಜನಗರ ಜಿಲ್ಲೆ. ಒಟ್ಟೂರು ಕೆಂದಪ್ಪ, ಶಿವಮೊಗ್ಗ ಜಿಲ್ಲೆ. ಶಿವಪ್ಪ ಗುರುಸಿದ್ದಪ್ಪ, ಧಾರವಾಡ ಜಿಲ್ಲೆ. ಮಲ್ಲೇಶಪ್ಪ, ಕಲಬುರಗಿ ಜಿಲ್ಲೆ. ಮಾದನಾಯಕ ಮೈಸೂರು ಜಿಲ್ಲೆ.

ಜಿ.ಕೆ. ರಾಮು, ಕೊಡುಗು ಜಿಲ್ಲೆ. ನವಲಿಂಗ ಪಾಟೀಲ, ಬೀದರ್ ಜಿಲ್ಲೆ. ರಾಮಯ್ಯ, ಹಾಸನ ಜಿಲ್ಲೆ. ಮುನಿರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆ. ಶಾಂತಪ್ಪ ಶಿವಯೋಗಪ್ಪ ತಳವಾರ, ವಿಜಯಪುರ ಜಿಲ್ಲೆ. ಶರಣಪ್ಪ ಮಾಡ್ನಾಳ ಯಾದಗಿರಿ ಜಿಲ್ಲೆ. ಸಹದೇವಪ್ಪ ರಾಮಪ್ಪ ಕಮಡೊಳ್ಳಿ, ಹಾವೇರಿ ಜಿಲ್ಲೆ. ಗಣಪತಿ ಈರಪ್ಪ ಬಡಿಗೇರ, ಬಾಗಲಕೋಟೆ ಜಿಲ್ಲೆ.

ರಂಗೇರಿದ ಸಾಂಸ್ಕೃತಿಕ ಕಾರ್ಯಕ್ರಮ

ಸಮಾರೋಪದ ನಂತರ ಬಯಲು ರಂಗಮಂದಿರದಲ್ಲಿ ವಿವಿಧ ಕಲಾತಂಡಗಳು ನಡೆಸಿಕೊಟ್ಟ ಜಾನಪದ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ನಾಡಿನ ವಿವಿಧ ಭಾಗಗಳಿಂದ ಕಲಾವಿದರು ಪ್ರದರ್ಶನ ನೀಡಿದರು. ನೂರಾರು ಆಸಕ್ತರು ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

***

ಜನಪದರನ್ನು ಗೌರವಿಸುವುದು ನಮ್ಮ ಧರ್ಮ. ರಾಜ್ಯ ಸರ್ಕಾರ ಅವರಿಗೆ ನೀಡುವ ಮಾಸಾಶನವನ್ನು ₨5 ಸಾವಿರಕ್ಕೆ ಹೆಚ್ಚಿಸಬೇಕು
-ಅನಿತಾ ಕುಮಾರಸ್ವಾಮಿ,ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.