ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದಲ್ಲಿ ಏ.21 ರಿಂದ 23 ರವರೆಗೆ ಗ್ರಾಮ ದೇವತೆಗಳ ಅಗ್ನಿಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ.
ಏ.21ರ ಸಂಜೆ ಬಸವೇಶ್ವರ ಸ್ವಾಮಿ ಯಳವಾರ, 22ರಂದು ಬೆಳಿಗ್ಗೆ ಅಗ್ನಿಕೊಂಡೋತ್ಸವ ನಡೆಯಲಿದೆ. ನಂತರ ಬೆಟ್ಟಹಳ್ಳಿ ಆಂಜನೇಯ ಸ್ವಾಮಿ ಮತ್ತು ಗ್ರಾಮ ದೇವತೆಗಳ ಮೆರವಣಿಗೆ ನಡೆಯಲಿದೆ.
ಏ.22ರಂದು ಸಂಜೆ ಮಾರಮ್ಮ ಮತ್ತು ಕಬ್ಬಾಳಮ್ಮ ದೇವಿ ಯಳವಾರ, 23ರಂದು ಬೆಳಿಗ್ಗೆ ಅಗ್ನಿಕೊಂಡೋತ್ಸವ ಜರುಗಲಿದೆ.
23 ರಂದು ರಾತ್ರಿ ಗ್ರಾಮಸ್ಥರು ಹಾಗೂ ಸ್ಥಳೀಯ ಕಲಾವಿದರಿಂದ ‘ರಾಜಸುಯಾಗ’ ಪೌರಾಣಿಕ ನಾಟಕ ಪ್ರದರ್ಶನವಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.