ರಾಮನಗರ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ರಾಜೀವ್ ರಾಣಾ ಮತ್ತು ಹಿರಿಯ ಸಾಂಖ್ಯಿಕ ಅಧಿಕಾರಿ ಮಹೇಶ್ ಗಹ್ಲಾವತ್ ಅವರನ್ನು ಒಳಗೊಂಡ ಡಿಒಆರ್‌ಡಿ ತಂಡವು ಜಿಲ್ಲೆಯ ಗುಡೇಮಾರನಹಳ್ಳಿ, ಮೋಟಗೊಂಡನಹಳ್ಳಿ, ನಾರಸಂದ್ರ ಹಾಗೂ ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿತು.
ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ, ವಂದಾರಗುಪ್ಪೆ, ಚಕ್ಕೆರೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ತಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಷ್ಟç ಉದ್ಯೋಗ ಖಾತರಿ ಯೋಜನೆ, ಎನ್‌ಆರ್‌ಎಲ್‌ಎಂ, ಪಿಎಂಜಿಎಸ್‌ವೈ ಹಾಗೂ ಯೋಜನೆಗೆ ಸಂಬಂಧಿಸಿದಂತೆ ದನದ ಕೊಟ್ಟಿಗೆ, ಅಂಗನವಾಡಿ ಕಟ್ಟಡ, ವಸತಿ, ಮನೆ, ಇತರ ಕಾಮಗಾರಿಗಳನ್ನು ತಂಡ ವೀಕ್ಷಿಸಿ, ಕಡತಗಳನ್ನು ಪರಿಶೀಲಿಸಿತು. ಹೌಸಿಂಗ್ ಪಿಂಚಣಿ, ಮಾಸಾಶನ ಫಲಾನುಭವಿಗಳನ್ನು ಭೇಟಿ ಮಾಡಿತು.
ಸ್ವ-ಸಹಾಯ ಸಂಘದ ಮಹಿಳೆಯರೊಂದಿಗೆ ಸಂವಾದ ನಡೆಸಿದ ತಂಡವು, ನಂತರ ಗೊಂಬೆ ತಯಾರಿಕ ಘಟಕಕ್ಕೆ ಭೇಟಿ ನೀಡಿತು. ಈ ವೇಳೆ ರಾಮನಗರ ತಾಲ್ಲೂಕು ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳು, ಸಿಬ್ಬಂದಿ, ನರೇಗಾ ಅಧಿಕಾರಿಗಳು, ಟಿ.ಸಿ ಎಂಇಇ ಎಂಜಿನಿಯರ್‌ಗಳೂ, ಎಸ್‌ಬಿಎಂ, ಜಿಲ್ಲಾ ಸಮಾಲೋಚಕರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಮತ್ತು ಜಿಪಿಎಲ್‌ಎಫ್ ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.