ಮಾಗಡಿ: ತಿರುಮಲೆ ರಂಗನಾಥ ಸ್ವಾಮಿಯ ತಿಂಗಳ ತೇರು ಮೇ 3ರಂದು ನಡೆಯಲಿದೆ ಎಂದು ಡ್ರೈವರ್ ನಾರಾಯಣಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮಾಗಡಿ ರಂಗನಾಥ ಸ್ವಾಮಿ ತಿಂಗಳ ತೇರನ್ನು ನಮ್ಮ ಕುಟುಂಬಸ್ಥರು ನೆರವೇರಿಸಿಕೊಂಡು ಬರುತ್ತಿದ್ದು, ಬ್ರಹ್ಮರಥೋತ್ಸವ ನಡೆದ ಒಂದು ತಿಂಗಳ ನಂತರ ತಿಂಗಳ ತೇರನ್ನು ನಡೆಸಲಾಗುತ್ತದೆ.
ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ಚಿಕ್ಕೇರಿನಲ್ಲಿ ಕೂರಿಸಿ ರಂಗನಾಥ ಸ್ವಾಮಿ ತೇರನ್ನು ಭಕ್ತರು ಎಳೆಯುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.