ADVERTISEMENT

‘ಮಾಂಡವ್ಯ ಗುಹೆ ಶಿಥಿಲ ಗೋಪುರ ದುರಸ್ತಿ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 13:10 IST
Last Updated 22 ಫೆಬ್ರುವರಿ 2020, 13:10 IST
ಮಾಗಡಿ ಮಾಂಡವ್ಯ ಗುಹೆಯಲ್ಲಿ ನಡೆದ ಮಹಾಶಿವರಾತ್ರಿ ಮಹೋತ್ಸವದಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಭಾಗವಹಿಸಿದ್ದರು.
ಮಾಗಡಿ ಮಾಂಡವ್ಯ ಗುಹೆಯಲ್ಲಿ ನಡೆದ ಮಹಾಶಿವರಾತ್ರಿ ಮಹೋತ್ಸವದಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಭಾಗವಹಿಸಿದ್ದರು.   

ಮಾಗಡಿ: ‘ಮಾಂಡವ್ಯ ಗುಹೆಯ ಬಂಡೆಯ ಮೇಲಿನ ಶಿಥಿಲ ಚಾರಿತ್ರಿಕ ಗೋಪುರ ದುರಸ್ತಿಪಡಿಸಿ ಕೊಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದರು.

ತಿರುಮಲೆ ಮಾಂಡವ್ಯ ಗುಹೆಯಲ್ಲಿ ಶನಿವಾರ ನಡೆದ ಕೆಂಪಣ್ಣ ಸ್ವಾಮಿ ಮಹಾಶಿವರಾತ್ರಿ 69ನೇ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಶಿವರಾತ್ರಿ ಉಪವಾಸ, ಜಾಗರಣೆ ಮತ್ತು ಶಿವನ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದಾಗಿದೆ. ಮನಸ್ಸಿನ ಶುದ್ಧಿಯಿಂದ ನಿರ್ಮಲವಾದ ಭಕ್ತಿಯ ಮೂಲಕ ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ಕಾಣುವ ಮಾರ್ಗವೇ ಶಿವರಾತ್ರಿ. ಸ್ಮಾರಕಗಳ ರಕ್ಷಣೆಗೆ ಸರ್ಕಾರದ ಮೂಲಕ ಅಭಿವೃದ್ಧಿ ಮಾಡಿಸಲು ಶ್ರಮಿಸುವೆ ಎಂದರು.

ADVERTISEMENT

ಸೇವಾ ಟ್ರಸ್ಟ್ ನ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಟಿ.ಕೆ.ರಮೇಶ್, ಗೌರವಾಧ್ಯಕ್ಷ ಟಿ.ಎಂ.ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಸಿ ಟಿ.ಬಿ.ರವಿ ಮಾತನಾಡಿದರು.

ಚೌಡೇಶ್ವರಿ ಮಹಿಳಾ ಭಜನೆ ತಂಡದವರು ಇಡೀ ರಾತ್ರಿ ಭಜನೆಯ ಕೀರ್ತನೆಗಳನ್ನು ಹಾಡಿದರು. ಮಹಾಶಿವರಾತ್ರಿಯ ಶಿವರಾಧನೆಯ ಪ್ರಯುಕ್ತ ಸಾರ್ವಜನಿಕ ಅನ್ನಸಂತರ್ಪಣೆ ಅವಿರತವಾಗಿ ನಡೆಯಿತು. ಎಚ್‌.ಎಂ. ರೇವಣ್ಣ, ಪತ್ನಿ ವತ್ಸಲಾ ರೇವಣ್ಣ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಎಸ್.ಮಹದೇವ್, ಹೊಸಪೇಟೆ ಚಂದ್ರಯ್ಯ, ಬಾಲರಾಜು, ಶಿವಾನಂದ್, ಬಸವರಾಜು, ಉಮಾಪತಿ, ಕಲ್ಲೂರು ಶಿವಣ್ಣ, ಎಂ.ಟಿ.ಶಿವಣ್ಣ, ವೆಂಕಟರಾಮಯ್ಯ,ಸಹಕಾರ್ಯದರ್ಶಿ ಪದ್ಮನಾಭ್, ಖಜಾಂಚಿ ಟಿ.ವಿ.ಶೇಷಗಿರಿ, ಸಹ ಖಜಾಂಚಿ ಟಿ.ವಿ.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಟಿ.ಕೆ. ವೆಂಕಟೇಶಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.