ADVERTISEMENT

ವಂಡರ್‌ಲಾ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 20:50 IST
Last Updated 18 ನವೆಂಬರ್ 2020, 20:50 IST

ರಾಮನಗರ: ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌‌ನಲ್ಲಿ ಇದೇ 20ರಿಂದ ವಾಟರ್‍ ರೈಡ್‌ ಕ್ರೀಡೆಗಳು ಸಹ ಆರಂಭ ಆಗಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ಸುಮಾರು ಎಂಟು ತಿಂಗಳ ಕಾಲ ಬಂದ್‌ ಆಗಿದ್ದ ಈ ಪಾರ್ಕ್‌ ಇದೇ 13ರಿಂದ ಮತ್ತೆ ಮನೋರಂಜನಾ ಸೇವೆ ಆರಂಭಿಸಿತ್ತು.‌

ಇದೀಗ ನೀರಿನಲ್ಲಿ ಆಡುವ ಕ್ರೀಡೆಗಳಿಗೂ ಅನುಮತಿ ದೊರೆತಿದೆ. ಕೋವಿಡ್‌ ಸುರಕ್ಷತಾ ಕ್ರಮಗಳೊಂದಿಗೆ ದಿನಕ್ಕೆ ಗರಿಷ್ಠ4 ಸಾವಿರ ಮಂದಿಗೆ ಪ್ರವೇಶ ಸೀಮಿತಗೊಳಿಸಲಾಗಿದೆ.

ADVERTISEMENT

ಅಂತೆಯೇ ಪುನರಾರಂಭದ ರಿಯಾಯಿತಿಯಾಗಿ ಪ್ರವೇಶ ಶುಲ್ಕವನ್ನು ₹699ಕ್ಕೆ ಇಳಿಸಲಾಗಿದೆ. ಶುಕ್ರವಾರ, ಶನಿವಾರ
ಹಾಗೂ ಭಾನುವಾರದಂದು ಮಾತ್ರ ಪಾರ್ಕ್‌ ತೆರೆದಿರುತ್ತದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಚಿಟ್ಟಲಪಿಳ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.