ಸಾಗರ: ಇಲ್ಲಿಗೆ ಸಮೀಪದ ಕಾರ್ಗಲ್‌ನಲ್ಲಿ ನಾದ ಭಾರತಿ ಸಂಗೀತ ಅನುಸಂಧಾನ ಪ್ರತಿಷ್ಠಾನವು ಏ. 17ರಿಂದ 23ರವರೆಗೆ ರಾಜ್ಯಮಟ್ಟದ ಸಂಗೀತ ಶಿಕ್ಷಣ ಶಿಬಿರ ಹಾಗೂ ಸಂಗೀತ ನೃತ್ಯ ಸಮ್ಮೇಳನವನ್ನು ಏರ್ಪಡಿಸಿದೆ.
17ರಂದು ಸಂತ ಶಿಶುನಾಳ ಷರೀಫ ಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಏ. 18ರಂದು ಮಧ್ಯಾಹ್ನ 3.30ರಿಂದ 5.30ರವರೆಗೆ ಪ್ರಕೃತಿ-ಪರಿಸರ-ಸಂಗೀತ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಶಿರಸಿಯ ಪರಿಸರವಾದಿ ಪಾಂಡುರಂಗ ಹೆಗಡೆ, ಅರಣ್ಯ ಅಧಿಕಾರಿ ಆಲ್ವಿನ್ ಡಿಸೋಜ, ಎ.ಎಸ್. ಮಹಾಬಲಗಿರಿ ಭಾಗವಹಿಸಲಿದ್ದಾರೆ. ಸಂಜೆ 6ರಿಂದ ರಾತ್ರಿ 9ರವರೆಗೆ ಶಿವಮೊಗ್ಗದ ಹುಮಾಯೂನ್ ಹರ್ಲಾಪುರ್ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
19ರಂದು ಮಧ್ಯಾಹ್ನ 3.30ರಿಂದ 5.30ರವರೆಗೆ ಸಾಮವೇಧ, ಸಂಗೀತ ಪ್ರಾಚೀನತೆ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಡಾ.ಗಣಪತಿ ಭಟ್ ಕತ್ಗಾಲ್, ವಿದ್ವಾನ್ ಶಂಭುಭಟ್ ಕಡತೋಕ ಪಾಲ್ಗೊಳ್ಳಲಿದ್ದಾರೆ. ಸಂಜೆ 6ರಿಂದ ಹೊನ್ನಾವರ ಪಂಡಿತ್ ಜಿ.ಆರ್.ಭಟ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
2ರಂದು ಮಧ್ಯಾಹ್ನ ಜನಸಾಮಾನ್ಯರಲ್ಲಿ ಸಂಗೀತ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು ಬೆಂಗಳೂರಿನ ನರಹರಿ ದೀಕ್ಷಿತ್, ವಿಜಾಪುರದ ಶ್ರೀಮಂತ ಅವಟೆ, ರಾಜೇಂದ್ರ ಬಾಳೆಹಳ್ಳಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6ಕ್ಕೆ ಬೆಂಗಳೂರಿನ ಮೃತ್ಯುಂಜಯ ದೊಡ್ಡವಾಡ ಹಾಗೂ ಸಾಗರದ ನಾಗೇಂದ್ರ ಕುಮಟಾ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಾಟಾಗಿದೆ.
21ರಂದು ಮಧ್ಯಾಹ್ನ ಭಾರತೀಯ ಪರಂಪರೆ ಮತ್ತು ಧಾರ್ಮಿಕ ಸಂಸ್ಕಾರಗಳಲ್ಲಿ ಸಂಗೀತ ಮತ್ತು ನೃತ್ಯ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಕುಂದಾಪುರದ ಮಂಜುನಾಥ ಅಡಿಗರು, ಸಿದ್ದಾಪುರದ ಮೋಹನ ಹೆಗಡೆ ಭಾಗವಹಿಸಲಿದ್ದಾರೆ. ಸಂಜೆ ಮುಂಡಗೋಡು ನಾಟ್ಯಾಂಜಲಿ ಕಲಾ ಕೇಂದ್ರದ ಶಶಿರೇಖಾ ಬೈಜು ಮತ್ತು ತಂಡದವರಿಂದ ಭರತನಾಟ್ಯ, ಬೆಂಗಳೂರಿನ ರಘುರಾಮ್ ಬಳಗದವರಿಂದ ಕರ್ನಾಟಕ ಸಂಗೀತ ಏರ್ಪಡಿಸಲಾಗಿದೆ.
22ರಂದು ಯಕ್ಷಗಾನದಲ್ಲಿ ಸಾಂಪ್ರಾದಾಯಿಕ ನೆಲೆಗಟ್ಟು-ಹಿಂದೆ -ಇಂದು-ಮುಂದೆ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ತ್ರಯಂಬಕ ಹೆಗಡೆ, ಪ್ರಶಾಂತ ಮಧ್ಯಸ್ಥ, ಬಿ.ಎಸ್. ಸುಬ್ರಮಣ್ಯ ಮೂರ್ತಿ ಪಾಲ್ಗೊಳ್ಳಲಿದ್ದಾರೆ. ಸಂಜೆ ನಿಟ್ಟೂರಿನ ರಾಮೇಶ್ವರ ಮಕ್ಕಳ ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
23ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಕಾಶ್ ಕಲ್ಲಾರಮನೆ ಮತ್ತು ಪಂಡಿತ್ ಮಡಿವಾಳಯ್ಯ ಸಾಲಿ ಅವರಿಂದ ಲಯ- ಲಾಸ್ಯ-ವಾದನ- ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.