ADVERTISEMENT

ವಿಮೆ ಯೋಜನೆ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:35 IST
Last Updated 23 ಸೆಪ್ಟೆಂಬರ್ 2011, 6:35 IST

ಸಾಗರ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಕುಟುಂಬಕ್ಕೆ ಉಚಿತವಾಗಿ ವಿಮೆ ಮಾಡಿಸುವ ಯೋಜನೆ ಆರಂಭಿಸುತ್ತಿದ್ದು ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಜಿ.ಎಲ್. ಪ್ರವೀಣ್‌ಕುಮಾರ್ ಹೇಳಿದರು.

ಇಲ್ಲಿನ ನಗರಸಭೆಯು ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಬಡವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರೂಪಿಸಿರುವ ಉಚಿತ `ಕುಟುಂಬ ಆರೋಗ್ಯ ವಿಮಾ ಯೋಜನೆ~ಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಾರ್ಷಿಕ ರೂ 36ಸಾವಿರಕ್ಕಿಂತಲೂ ಕಡಿಮೆ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಇತರ ಸಮುದಾಯದವರು `ಕುಟುಂಬ ಆರೋಗ್ಯ ವಿಮೆ ಯೋಜನೆ~ಗೆ ಅರ್ಹರಾಗಿದ್ದಾರೆ. ವಾರ್ಷಿಕ ರೂ 150ವಿಮಾ ಕಂತನ್ನು ನಗರಸಭೆಯೇ ಪಾವತಿ ಮಾಡಲಿದೆ ಎಂದು  ತಿಳಿಸಿದರು.

`ಕುಟುಂಬ ಆರೋಗ್ಯ ವಿಮಾ ಯೋಜನೆ~ಯಡಿ ಸದಸ್ಯರಾದರೆ ಕುಟುಂಬದ ಯಾವುದೇ ಸದಸ್ಯ ಒಮ್ಮೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದರೆ ್ಙ 15ಸಾವಿರವರೆಗೂ ಪರಿಹಾರ ಪಡೆಯಬಹುದು, ಅಪಘಾತದಲ್ಲಿ ಮರಣ ಹೊಂದಿದರೆ ಅವರ ವಾರಸುದಾರರಿಗೆ ರೂ 25ಸಾವಿರ ಪರಿಹಾರ ನೀಡಲಾಗುವುದು ಎಂದರು.

ಮುಖ್ಯ ಅತಿಥಿಯಾಗಿದ್ದ ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗದವರು ಜಾತಿ ಪ್ರಮಾಣ ಪತ್ರದ ಜತೆಗೆ ಆದಾಯ ದೃಢೀಕರಣ ಪತ್ರ, ಬಿಪಿಎಲ್ ಕಾರ್ಡ್ ಹೊಂದಿರುವ ಇತರ ಸಮುದಾಯದವರು ಬಿಪಿಎಲ್ ಕಾರ್ಡ್‌ನ ಜೆರಾಕ್ಸ್ ಪ್ರತಿ ನೀಡಬೇಕು.
 
ಎರಡೂ ವರ್ಗಕ್ಕೆ ಸೇರಿದ ಫಲಾನುಭವಿಗಳು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಸ್ಟಾಂಪ್ ಳತೆಯ ಪೋಟೊವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ನಗರಸಭೆ ಪೌರಾಯುಕ್ತ (ತರಬೇತಿ) ರಾಮಪ್ರಸಾದ ಮನೋಹರ, ಸದಸ್ಯರಾ ಎಸ್.ಎಲ್. ಮಂಜುನಾಥ್, ಬಿ.ಎಸ್. ಕುಮಾರ್, ಉಮಾವತಿ, ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯ ವಿನಾಯಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.