ADVERTISEMENT

‘ಸರ್ಕಾರಿ ನೌಕರರ ವೇತನ ಶೇ 100ರಷ್ಟು ಏರಿಸಿದ್ದ ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 6:42 IST
Last Updated 8 ಮಾರ್ಚ್ 2018, 6:42 IST

ಭದ್ರಾವತಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿದಾಗ ಸರ್ಕಾರಿ ನೌಕರರ ಮೂಲವೇತನದಲ್ಲಿ ಶೇ 100ರಷ್ಟು ಏರಿಕೆ ಮಾಡಿತ್ತು’ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು.

ಅಂದು ಬಿಜೆಪಿ ಸರ್ಕಾರ ನೌಕರರ ಜತೆ ನಡೆದುಕೊಂಡ ರೀತಿ ಇಂದಿನ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿರುವ ರೀತಿಯನ್ನು ಅವಲೋಕನ ಮಾಡಿದಾಗ ಎಲ್ಲೋ ಒಂದು ಕಡೆ ವ್ಯವಸ್ಥಿತವಾಗಿ ನೌಕರರ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಸದ್ಯ ಆಗಿರುವ ವೇತನ ಪರಿಷ್ಕರಣೆ ಶೇ 30ರಷ್ಟು ಎಂದಿದ್ದರೂ ಅದರಲ್ಲಿ ನೌಕರರಿಗೆ ಸಿಕ್ಕಿರುವ ಲಾಭ ಕೇವಲ ಶೇ 7ರಿಂದ 8. ನೌಕರರ ಸಮ್ಮೇಳನ ಇದೆ ಎಂಬ ಕಾರಣಕ್ಕಾಗಿ ಸಚಿವ ಸಂಪುಟದ ಅನುಮೋದನೆ ಪಡೆಯದೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ದೂರಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಚುನಾವಣೆ ಜಿಲ್ಲಾ ಸಹ ಪ್ರಭಾರಿ ಜಿ. ಧರ್ಮಪ್ರಸಾದ್, ವಿ. ಕದಿರೇಶ್, ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ವೆಂಕಟೇಶ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.